ಉತ್ತರ ಪ್ರದೇಶ: ಶಿಕ್ಷಕಿ (Teacher) ಸ್ನಾನ ಮಾಡುವ ದೃಶ್ಯವನ್ನು ಕದ್ದು ವಿಡಿಯೋ (Obscene Video) ಮಾಡಿಕೊಂಡ ವಿದ್ಯಾರ್ಥಿಯೊಬ್ಬ ಆಕೆಗೆ ತನ್ನ ಜತೆ ಲೈಂಗಿಕ ಸಂಪರ್ಕದಲ್ಲಿರಬೇಕು ಎಂದು ನಿರಂತರವಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ. ಇದಕ್ಕೆ ಒಪ್ಪಿಗೆ ಸೂಚಿಸದ ಶಿಕ್ಷಕಿ ನಡೆಯಿಂದ ಕೆರಳಿದ ವಿದ್ಯಾರ್ಥಿ, ವಿಡಿಯೋವನ್ನು ತನ್ನ ಸ್ನೇಹಿತರಿಗೆ ಕಳಿಸುವ ಮುಖೇನ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ವರದಿಯಾಗಿದೆ.
10ನೇ ತರಗತಿ ವಿದ್ಯಾರ್ಥಿಗಳ ಮಾನಸಿಕ ಹಿಂಸೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಶಿಕ್ಷಕಿಯನ್ನು ಇದೀಗ ಸಾವಿನ ದವಡೆಯಿಂದ ಪಾರು ಮಾಡಲಾಗಿದ್ದು, ಅಂತಿಮವಾಗಿ ಬೆದರಿಕೆಯೊಡ್ಡಿದ್ದ ನಾಲ್ವರು ವಿದ್ಯಾರ್ಥಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಪಾಠ ಹೇಳಿಕೊಡಲು ಬಂದ ಶಿಕ್ಷಕಿಯನ್ನೇ ಕೆಟ್ಟದಾಗಿ ನೋಡಿದ ಈ ವಿದ್ಯಾರ್ಥಿಗಳು, ಆಕೆಯ ಕಣ್ಣೀರಿಗೆ ಕಾರಣವಾಗಿದ್ದಲ್ಲದೇ, ಈಗ ಮೂವರು ಮಾತ್ರ ವಿಡಿಯೋ ನೋಡಿದ್ದಾರೆ. ನೀನು ಸಹಕರಿಸದೆ ಹೋದಲ್ಲಿ ಜಾಲತಾಣಗಳಲ್ಲಿ ಹರಿಬಿಡುತ್ತೇನೆ, ಆಗ ಎಲ್ಲರೂ ನೋಡ್ತಾರೆ ಎಂದು ಬ್ಲ್ಯಾಕ್ ಮೇಲೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಆಗ್ರಾದಲ್ಲಿ ವಾಸವಿದ್ದ ಶಿಕ್ಷಕಿ, ಮಥುರಾದ ಶಾಲೆಯೊಂದರಲ್ಲಿ 10ನೇ ತರಗತಿ ಮಕ್ಕಳಿಗೆ ಬೋಧನೆ ಮಾಡುವ ಕೆಲಸ ನಿರ್ವಹಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಕಲಿಕೆ ತಪ್ಪಬಾರದು ಎಂದು ಹೆಚ್ಚಿನ ಸಮಯ ಕ್ಲಾಸ್ನಲ್ಲಿಯೇ ಕಳೆಯುತ್ತಿದ್ದರು. ಈ ಮಧ್ಯೆ ಶಿಕ್ಷಕಿ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಕದ್ದು ವಿಡಿಯೋ ರೆಕಾರ್ಡ್ ಮಾಡಿಕೊಂಡ ಓರ್ವ ವಿದ್ಯಾರ್ಥಿ, ಇದೊಂದು ಅಶ್ಲೀಲ ವಿಡಿಯೋವನ್ನು ಮುಂದಿಟ್ಟು ಆಕೆಗೆ ಆಗಾಗ್ಗೆ ದೈಹಿಕ ಸಂಬಂಧ ಬೆಳೆಸುವಂತೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ.
ವಿದ್ಯಾರ್ಥಿಗಳ ಚಿತ್ರಹಿಂಸೆಯಿಂದ ಬೇಸತ್ತ ಶಿಕ್ಷಕಿ ಯಾರಿಗೂ ಹೇಳಲಾಗದೆ, ಮಾನ ಮಾರ್ಯದೆ ವಿಷಯಕ್ಕೆ ಅಂಜಿ ಮೌನಕ್ಕೆ ಶರಣಾಗಿದ್ದರು. ಆದ್ರೆ, ಬೆದರಿಕೆ ಕರೆಗಳು ವಿಪರೀತವಾಗುತ್ತಿದ್ದಂತೆ ಆಕೆ ಆತ್ಮಹತ್ಯೆಗೆ ಮುಂದಾಗಿದ್ದರು. ಈ ವೇಳೆ 'ಮಿಷನ್ ಶಕ್ತಿ' ಅಭಿಯಾನ ತಂಡದ ಸಹಾಯದಿಂದ ಬದುಕುಳಿದ ಶಿಕ್ಷಕಿ, ಆಗ್ರಾದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸೂರಜ್ ರೈ ಅವರಿಗೆ ದೂರು ನೀಡಿದರು. ಶಿಕ್ಷಕಿಯ ದೂರಿನ ಮೇರೆಗೆ ಇದೀಗ ಪೊಲೀಸರು ಆರೋಪಿ ಮತ್ತು ಆತನ ಮೂವರು ಸ್ನೇಹಿತರನ್ನು ಬಂಧಿಸಿದ್ದಾರೆ.