ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯಿತಿಯು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಒಳಗೊಂಡಿರುವ ಸೌರಶಕ್ತಿ ಚಾಲಿತ ಸಮುದ್ರದ ನೀರಿನ ಸ್ಥಾವರ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ಪಡೆದುಕೊಂಡಿದೆ. ಮಂಜೇಶ್ವರ ಗ್ರಾಮ ಪಂಚಾಯತಿ ಕಾರ್ಯದರ್ಶಿ ಕಾರ್ಯನಿರ್ವಾಹಕ ಅಧಿಕಾರಿಯಾಗಿರುತ್ತಾರೆ ಮತ್ತು ಕೇರಳ ಜಲ ಪ್ರಾಧಿಕಾರವು 1 ಕೋಟಿ ನಲವತ್ತು ಲಕ್ಷ ರೂಪಾಯಿಗಳ ಯೋಜನೆಗೆ ತಾಂತ್ರಿಕ ಬೆಂಬಲವನ್ನು ನೀಡಿದೆ.
ಅಲ್ಲದೆ, ಸರ್ಕಾರಿ ವಲಯದಲ್ಲಿ ಕೇರಳದ ಮೊದಲ ಸೌರಶಕ್ತಿ ಚಾಲಿತ ಸಮುದ್ರದ ನೀರಿನ ನಿರ್ಮಲೀೀಕರಣ ಘಟಕದ ಅನುμÁ್ಠನಕ್ಕಾಗಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ತಾಂತ್ರಿಕ ಸಮಿತಿ, ವಿಶೇಷ ಅಧಿಕಾರಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್, ಕೇರಳ ಜಲ ಪ್ರಾಧಿಕಾರದ ಎಂಜಿನಿಯರ್‍ಗಳು, ಎಲ್‍ಐಡಿ ಮತ್ತು ಇಡಬ್ಲ್ಯೂ, ಸಿಡಬ್ಲ್ಯೂ, ಆರ್‍ಡಿಎಂ ಸದಸ್ಯರಾಗಿ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆ ಸಮಿತಿ ರಚನೆಯೊಂದಿಗೆ ಸ್ಥಾವರ ನಿರ್ಮಾಣ ಕಾರ್ಯ ಆರಂಭವಾಗಲಿದೆ.
ಜಿಲ್ಲೆಯಲ್ಲಿ ತೀವ್ರ ಕುಡಿಯುವ ನೀರಿನ ಅಭಾವವಿರುವ ಪ್ರದೇಶವಾಗಿರುವ ಕಾರಣ ಮಂಜೇಶ್ವರ ಪಂಚಾಯಿತಿಯನ್ನು ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಇನ್ಭಾಶೇಖರ್ ಮಾಹಿತಿ ನೀಡಿರುವರು. ಜಿಲ್ಲೆಯಲ್ಲಿ ಆದ್ಯತೆ ಹಾಗೂ ಪ್ರಾಯೋಗಿಕ ಮಾದರಿಯಲ್ಲಿ ಈ ಯೋಜನೆ ಜಾರಿಯಾಗಲಿದ್ದು, ಕಾಮಗಾರಿಗೆ ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷಾಧಿಕಾರಿ ವಿ.ಚಂದ್ರನ್ ವಿಜಯವಾಣಿಗೆ ಮಾಹಿತಿ ನೀಡಿರುವರು.
2024-25ರ ಆರ್ಥಿಕ ವರ್ಷದಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಸೇರಿದಂತೆ ಜಿಲ್ಲೆಯ ಇತರೆ 22 ಯೋಜನೆಗಳಲ್ಲಿ 6.29 ಕೋಟಿ ಯೋಜನೆಗಳು ಮಂಜೂರಾಗಿವೆ.
ಏನಿದು ಯೋಜನೆ:
ಸಮುದ್ರದ ನೀರನ್ನು ಕುಡಿಯುವ ನೀರು ಸಹಿತ ಪ್ರಾಥಮಿಕ ಆವಶ್ಯಕತೆಗಳಿಗೆ ಅನುಗುಣವಾಗಿ ವಿಶೇಷ ಯಂತ್ರೋಪಕರಣಗಳ ಮೂಲಕ ಸಂಗ್ರಹಿಸಿ ಬಳಕೆಗೆ ಯೋಗ್ಯವಾಗಿಸುವುದು ಈ ಯೋಜನೆಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಗಡಿಗಳನ್ನು ಹಂಚಿಕೊಂಡಿರುವ ಕೇರಳದ ಅತ್ಯುತ್ತರದ ಕೊನೆಯ ಗ್ರಾಮ ಪಂಚಾಯತಿಯಾದ ಮಂಜೇಶ್ವರ ಭಾರೀ ಜನದಟ್ಟಣೆಯ ಕೇಂದ್ರವಾಗಿದೆ. ಶಾಲೆ, ಕಾಲೇಜುಗಳು, ಕಾರ್ಖಾನೆಗಳು, ಕೃಷಿ, ವ್ಯಾಪಾರ ಹಾಗೂ ಜನವಸತಿ ದಟ್ಟಣೆಯ ಮಂಜೇಶ್ವರ ಗ್ರಾಮ ಪಂಚಾಯತಿ ಕಳೆದ ಕೆಲವು ವರ್ಷಗಳಿಂದ ಜನವರಿಯಿಂದಲೇ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಕೇರಳದಲ್ಲೇ ಮೊದಲ ಬಾರಿಗೆ ಪ್ರಾಯೋಗಿಕ ನೆಲೆಗಟ್ಟಲ್ಲಿ ಇಲ್ಲಿ ಈ ಯೋಜನೆಗೆ ಅನುಮತಿಸಲಾಗಿದೆ.