ಚಾಡ್: ಆಫ್ರಿಕಾ ಖಂಡದ ಉತ್ತರ ಭಾಗದ ದೇಶವಾದ ಚಾಡ್‌ನಲ್ಲಿ ಬೋಕೊ ಹರಾಮ್ ಭಯೋತ್ಪಾದಕರು ಭಾರಿ ದಾಳಿ ನಡೆಸಿದ್ದರಿಂದ ಚಾಡ್ ಸೇನೆಯ 40 ಸೈನಿಕರು ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಉತ್ತರ ಭಾಗದ ದೇಶವಾದ ಚಾಡ್‌ನಲ್ಲಿ ಬೋಕೊ ಹರಾಮ್ ಭಯೋತ್ಪಾದಕರು ಭಾರಿ ದಾಳಿ ನಡೆಸಿದ್ದರಿಂದ ಚಾಡ್ ಸೇನೆಯ 40 ಸೈನಿಕರು ಮೃತಪಟ್ಟಿದ್ದಾರೆ.
ದೇಶದ ಪಶ್ಚಿಮ ಭಾಗದಲ್ಲಿರುವ Ngouboua ಎಂಬ ಸೇನಾ ನೆಲೆಯ ಮೇಲೆ ಸೋಮವಾರ ನಸುಕಿನ ಜಾವ ಏಕಾಏಕಿ ದಾಳಿ ಮಾಡಿದ ಬೋಕೊ ಹರಾಮ್ ಉಗ್ರರು ಮನಸೋ ಇಚ್ಚೆ ಗುಂಡಿನ ದಾಳಿ ನಡೆಸಿದ್ದಾರೆ.
ಘಟನೆಯಲ್ಲಿ ಯುನಿಟ್ ಕಮಾಂಡರ್ ಕೂಡ ಮೃತಪಟ್ಟಿದ್ದಾರೆ ಎಂದು ಚಾಡ್ ಸೇನಾ ವಕ್ತಾರರು ತಿಳಿಸಿದ್ದಾರೆ.
ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಚಾಡ್ ಅಧ್ಯಕ್ಷ ಮಹಮತ್ ಇಡ್ರಿಸ್ ಡೆಬಿ ಇಟ್ನೊ ಅವರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದರು.
'ನಮ್ಮ ಮೇಲೆ ದಾಳಿ ಮಾಡಿದ ಉಗ್ರರನ್ನು ಪ್ರತಿ ದಾಳಿ ಮಾಡಿ ಹತ್ಯೆ ಮಾಡಿದ್ದೇವೆ. ಸ್ಥಳದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ' ಎಂದು ಅವರು ತಿಳಿಸಿದ್ದಾರೆ.
ಪಕ್ಕದ ನೈಜೀರಿಯಾ ಜೊತೆ ಗಡಿ ಸಂಘರ್ಷ ಹೊಂದಿರುವ ಚಾಡ್ ಮೇಲೆ ನೈಜಿರಿಯಾ ಮೂಲದ ಬೊಕೊ ಹರಾಮ್ ಉಗ್ರರೂ ಸಹ ಕೆಂಗೆಣ್ಣು ಬೀರಿದ್ದಾರೆ.
ಚಾಡ್‌ನಲ್ಲಿ ಪಶ್ಚಿಮ ಸಂಸ್ಕೃತಿಯನ್ನು ಕಿತ್ತು ಹಾಕಿ, ಇಸ್ಲಾಂ ಸ್ಥಾಪಿಸಬೇಕು ಎಂದು ಬೊಕೊ ಹರಾಮ್ ಉಗ್ರರು ಚಾಡ್ ಮೇಲೆ ಆಗಾಗ ದಾಳಿ ಮಾಡುತ್ತಾರೆ.