HEALTH TIPS

ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ನಾಲ್ಕೇ ವರ್ಷದಲ್ಲಿ 47 ಸಾವಿರ ದೂರುಗಳು!

 ವದೆಹಲಿ: ಕಳೆದ ನಾಲ್ಕು ವರ್ಷಗಳಲ್ಲಿ ಪರಿಶಿಷ್ಟ ಜಾತಿಗಳ ಮೇಲಿನ ರಾಷ್ಟ್ರೀಯ ಆಯೋಗಕ್ಕೆ (NCSC) 47 ಸಾವಿರ ದೂರುಗಳು ದಾಖಲಾಗಿವೆ.

ಸುದ್ದಿಸಂಸ್ಥೆ ಪಿಟಿಐ ಈ ಕುರಿತು ಮಾಹಿತಿ ಕೇಳಿ ಆಯೋಗಕ್ಕೆ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿತ್ತು.

ಸಲ್ಲಿಕೆಯಾಗಿರುವ ದೂರುಗಳಲ್ಲಿ ಜಾತಿ ನಿಂದನೆಯ ದೂರುಗಳು ಹೆಚ್ಚಿವೆ.

ನಂತರದ ಸ್ಥಾನದಲ್ಲಿ ಭೂ ವಿವಾದ ತದನಂತರ ಸರ್ಕಾರಿ ಉದ್ಯೋಗಿಗಳ ವ್ಯಾಜ್ಯಗಳಾಗಿವೆ.

2020-21 ರಲ್ಲಿ 11,917 ಪ್ರಕರಣಗಳು ದಾಖಲಾಗಿವೆ

2021-22 ರಲ್ಲಿ 13,964 ಪ್ರಕರಣಗಳು ದಾಖಲಾಗಿವೆ

2022-23 ರಲ್ಲಿ 12,402 ಪ್ರಕರಣಗಳು ದಾಖಲಾಗಿವೆ

2024 ಇಲ್ಲಿವರೆಗೆ 9,550 ಪ್ರಕರಣಗಳು ದಾಖಲಾಗಿವೆ.

'ನಾನು ಅಧಿಕಾರವಹಿಸಿಕೊಂಡಾಗಿನಿಂದ ಕಚೇರಿಯನ್ನು ಜನಸಾಮಾನ್ಯರಿಗೆ ಮುಕ್ತವಾಗಿರಿಸಲಾಗಿದೆ. ಯಾವುದೇ ಒಂದು ದೂರನ್ನು ಗಮನಿಸದೇ ಬಿಡುವುದಿಲ್ಲ, ಅವೆಲ್ಲವನ್ನೂ ಪರಿಗಣಿಸುತ್ತೇವೆ' ಎಂದು NCSC ಅಧ್ಯಕ್ಷ ಕಿಶೋರ್ ಮಖವಾನಾ ಹೇಳಿದ್ದಾರೆ.

ಆಯೋಗಕ್ಕೆ ಉತ್ತರ ಪ್ರದೇಶದಿಂದ ಅತಿ ಹೆಚ್ಚು ದೂರುಗಳು ದಾಖಲಾಗುತ್ತಿವೆ. ನಂತರದ ಸ್ಥಾನದಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಇವೆ ಎಂದು ಅವು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries