HEALTH TIPS

ಮನ್ ಕಿ ಬಾತ್ ಪ್ರಶ್ನೋತ್ತರಿ ಸೀಸನ್ 4 ಆರಂಭ: ಯುವಕರು ಆತ್ಮವಿಶ್ವಾಸವನ್ನು ಮರಳಿ ಪಡೆದಿರುವದರು: ಜಿತೇಂದ್ರ ಸಿಂಗ್

ತಿರುವನಂತಪುರ: ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್. ಪ್ರಧಾನಿ ನರೇಂದ್ರ ಮೋದಿ ಅವರು ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ ಎಂದರು.

ಅವರು ನೆಹರು ಯುವ ಕೇಂದ್ರ ಮತ್ತು ಗ್ಲೋಬಲ್ ಗಿವರ್ಸ್ ಫೌಂಡೇಶನ್ ಜಂಟಿಯಾಗಿ ಕಾರ್ಯವಟ್ಟಂನ ಲಕ್ಷ್ಮೀಬಾಯಿ ನ್ಯಾಷನಲ್ ಕಾಲೇಜ್ ಆಫ್ ಫಿಸಿಕಲ್ ಎಜುಕೇಶನ್‍ನಲ್ಲಿ ಆಯೋಜಿಸಿದ್ದ ಮನ್ ಕಿ ಬಾತ್ ಕ್ವಿಜ್‍ನ ನಾಲ್ಕನೇ ಸೀಸನ್ ಅನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ದೇಶದ ಯುವಶಕ್ತಿಯನ್ನು ಸಂಘಟಿಸದೆ ಅಭಿವೃದ್ಧಿ ಹೊಂದಿದ ಭಾರತದ ಗುರಿ ಸಾಧ್ಯವಿಲ್ಲ. ಎಲ್ಲಾ ಯುವಕರಿಗೆ ಸಮಾನ ಅವಕಾಶಗಳಿಗಾಗಿ ಪ್ರಧಾನಿ ವೇದಿಕೆಯನ್ನು ಸೃಷ್ಟಿಸಿದ್ದಾರೆ. ಯುವಕರು ದೇಶದ ಒಳಗೆ ಮತ್ತು ಹೊರಗೆ ತಮ್ಮ ಸಾಮಥ್ರ್ಯವನ್ನು ಸಾಬೀತುಪಡಿಸಿದ್ದಾರೆ. ಹತ್ತು ವರ್ಷಗಳಲ್ಲಿ ಜಗತ್ತು ಭಾರತದ ಯುವ ಶಕ್ತಿಯ ಸಾಮಥ್ರ್ಯವನ್ನು ಗುರುತಿಸಿತು.

ಇದು ದೇಶದ ಯುವಕರಿಗೆ ಹೊಸ ಆತ್ಮವಿಶ್ವಾಸ ಮತ್ತು ಘನತೆಯನ್ನು ತಂದುಕೊಟ್ಟಿತು. ಯುವಶಕ್ತಿ,  ಕ್ರೀಡಾ ಕ್ಷೇತ್ರ ಹಾಗೂ ಪ್ರಧಾನಿಯವರ ಮನ್ ಕಿ ಬಾತ್ ನ ಆದರ್ಶಗಳನ್ನು ಸಂಭ್ರಮಿಸಲು ಇದೊಂದು ವೇದಿಕೆಯಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.

ತಿರುವನಂತಪುರಂನ ಕಾರ್ಯವಟ್ಟಂ  ಲಕ್ಷ್ಮೀಬಾಯಿ ನ್ಯಾಷನಲ್ ಕಾಲೇಜ್ ಆಫ್ ಫಿಸಿಕಲ್ ಎಜುಕೇಶನ್‍ನಲ್ಲಿ ಕೇಂದ್ರ ಸಚಿವರು ಅಂತಾರಾಷ್ಟ್ರೀಯ ತಾರೆಗಳೊಂದಿಗೆ ಸಂವಾದ ನಡೆಸಿದರು. ಮನ್ ಕಿ ಬಾತ್ ನ ಮೂರನೇ ಸೀಸನ್ ನ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಕೇಂದ್ರದ ಮಾಜಿ ಸಚಿವ ವಿ. ಮುರಳೀಧರನ್ ಅಧ್ಯಕ್ಷತೆ ವಹಿಸಿದ್ದರು. ಮುರಳೀಧರನ್ ಮಾತನಾಡಿ, ರಾಜಕೀಯ ನಾಯಕತ್ವವು ಜನರ ಸೇವಕರಾಗಿರಬೇಕು ಎಂಬ ಪ್ರಧಾನಿಯವರ ನೆನಪಿನ ಮಾತು ಪ್ರಸ್ತುತವಾಗಿದೆ.

ಜನರೊಂದಿಗೆ ಜೊತೆಗಿರುವ ಅಧಿಕಾರಿಗಳೇ ರಾಜಕೀಯ ಹುನ್ನಾರ ನಡೆಸುತ್ತಿರುವುದು ವಿಷಾದನೀಯ. ದೇಶದ ಪ್ರಗತಿಗೆ ಪೂರಕವಾಗಿ ನಾಗರಿಕ ಸೇವೆ ಬದಲಾಗಬೇಕಾದರೆ ರಾಜಕೀಯ ನಾಯಕತ್ವ ಅವರ ಜೊತೆ ನಿಲ್ಲಬೇಕು. ಕಣ್ಣೂರಿನಲ್ಲಿ ನಡೆದಿರುವಂತಹ ಸಂಗತಿಗಳು ನಿರಾಶಾದಾಯಕವಾಗಿವೆ ಎಂದರು.

ಪ್ರಾಂಶುಪಾಲ ಮತ್ತು ಪ್ರಾದೇಶಿಕ ಮುಖ್ಯಸ್ಥ ಡಾ. ಜಿ. ಕಿಶೋರ್, ನೆಹರು ಯುವ ಕೇಂದ್ರದ ರಾಜ್ಯ ಸಂಚಾಲಕ ಎಂ.ಅನಿಲ್ ಕುಮಾರ್, ಕೇಂದ್ರೀಯ ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಡಾ. ಎ. ರಾಧಾಕೃμÀ್ಣನ್ ನಾಯರ್, ಜಿಲ್ಲಾ ಯುವ ಅಧಿಕಾರಿ ಸಂದೀಪ್ ಕೃμÀ್ಣನ್ ಪಿ. ಭಾಗವಹಿಸಿದ್ದರು.

ಪ್ರಶ್ನೋತ್ತರಿ ಸೀಸನ್ ನಾಲ್ಕರ ವಿಜೇತರು ನವದೆಹಲಿಯಲ್ಲಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದಿದ್ದಾರೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries