ಹೈದರಾಬಾದ್: ಮಗ ಮೃತಪಟ್ಟಿರುವ ವಿಷಯ ತಿಳಿಯದ ಅಂಧ ವೃದ್ಧ ದಂಪತಿ ನಾಲ್ಕು ದಿನಗಳವರೆಗೆ ಮೃತದೇಹದೊಂದಿಗೆ ಮನೆಯಲ್ಲೇ ಇದ್ದ ಘಟನೆಯೊಂದು ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದಿದೆ.
ಮಗ ಮೃತಪಟ್ಟಿರುವುದು ತಿಳಿಯದೆ 4 ದಿನ ಶವದೊಂದಿಗೆ ಇದ್ದ ಅಂಧ ವೃದ್ಧ ದಂಪತಿ
0
ಅಕ್ಟೋಬರ್ 30, 2024
Tags
ಹೈದರಾಬಾದ್: ಮಗ ಮೃತಪಟ್ಟಿರುವ ವಿಷಯ ತಿಳಿಯದ ಅಂಧ ವೃದ್ಧ ದಂಪತಿ ನಾಲ್ಕು ದಿನಗಳವರೆಗೆ ಮೃತದೇಹದೊಂದಿಗೆ ಮನೆಯಲ್ಲೇ ಇದ್ದ ಘಟನೆಯೊಂದು ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದಿದೆ.
ಸೋಮವಾರ ಮನೆಯಿಂದ ದುರ್ವಾಸನೆ ಬರುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಅರೆಪ್ರಜ್ಞಾವಸ್ಥೆಯಲ್ಲಿದ್ದ ವೃದ್ಧ ದಂಪತಿಯೊಂದಿಗೆ ವ್ಯಕ್ತಿಯ ಶವ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮನೆಯಲ್ಲಿ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದು, ನಾಲ್ಕೈದು ದಿನಗಳ ಹಿಂದೆ ನಿದ್ರೆಯಲ್ಲಿಯೇ ಮೃತಪಟ್ಟಿರುವ ಶಂಕೆ ಇದೆ ಎಂದು ನಾಗೋಲ್ ಪೊಲೀಸ್ ಠಾಣೆ ಎಸ್‌ಎಚ್‌ಒ ಸೂರ್ಯ ನಾಯಕ್ ತಿಳಿಸಿದ್ದಾರೆ.
' 60 ವರ್ಷಕ್ಕಿಂತ ಮೇಲ್ಪಟ್ಟ ಅಂಧ ವೃದ್ಧ ದಂಪತಿಗೆ ತಮ್ಮ ಕಿರಿಯ ಮಗ ಮೃತಪಟ್ಟಿದ್ದಾನೆ ಎಂದು ತಿಳಿದಿರಲಿಲ್ಲ. ಆಹಾರ ಮತ್ತು ನೀರಿಗಾಗಿ ತಮ್ಮ ಮಗನನ್ನು ಕರೆಯಲು ಪ್ರಯತ್ನಿಸಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಊಟ, ನೀರಿಲ್ಲದೆ ದಂಪತಿ ಸುಸ್ತಾಗಿದ್ದರಿಂದ ಅವರ ಧ್ವನಿ ನೆರೆಹೊರೆಯವರಿಗೂ ಕೇಳಿಸಿಲ್ಲ' ಎಂದು ಅವರು ಹೇಳಿದ್ದಾರೆ.
ಘಟನೆ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.