ಕೋಝಿಕ್ಕೋಡ್ :ರಾತ್ರಿ ಬಂದು ರಸ್ತೆ ಬದಿಯ ಕೃಷಿ ಜಮೀನಿನಲ್ಲಿ ಆರು ಮೂಟೆ ಕಸೆ ಎಸೆದಿದ್ದ ಯುವತಿಗೆ ( Garbage Fine ) ಪಂಚಾಯ್ತಿ 50 ಸಾವಿರ ರೂಪಾಯಿ ದಂಡ ವಿಧಿಸಿದೆ. ಈ ಘಟನೆ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ತಿಕೋಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ಯುವತಿಯೊಬ್ಬಳು ರಾತ್ರಿ ಪುರಕ್ಕಾಡ್ ಹಾಗೂ ಪಾರೋಲಿನಾಟ ಗ್ರಾಮದ ಮಧ್ಯದಲ್ಲಿ ಆರು ಗೋಣಿಚೀಲ ಕಸ ಎಸೆದಿದ್ದಳು.
ಬೆಳಗ್ಗೆ ಕೃಷಿ ಜಮೀನಿನಲ್ಲಿ ಕಸದ ಮೂಟೆಗಳನ್ನು ಕಂಡ ಗ್ರಾಮಸ್ಥರು, ಪಂಚಾಯ್ತಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ದೂರು ಸಲ್ಲಿಸಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸುರೇಶ್ ಚಂಗಡತ್, ಪಂಚಾಯತ್ ಅಧ್ಯಕ್ಷೆ ಜಮೀಲಾ ಸಮದ್, ಪಂಚಾಯತ್ ಅಧಿಕಾರಿಗಳು ಪರಿಶೀಲನೆ ನಡಸಿದ್ದರು. ಗೋಣಿಚೀಲಗಳನ್ನ ಪರಿಶೀಲಿಸಿದಾಗ ಪಳ್ಳಿಕಾರದ 'ಪ್ರಾರ್ಥನಾ' ಎಂಬ ನಿವಾಸದವರದ್ದು ಎಂದು ತಿಳಿದು ಬಂದಿದೆ. ಕೂಡಲೇ ಪಂಚಾಯಿತಿ ಅಧ್ಯಕ್ಷೆ, ಪಂಚಾಯಿತಿ ಸದಸ್ಯೆ ವಿಬಿತಾ ಬೈಜು ಹಾಗೂ ಕಾರ್ಯದರ್ಶಿ ಅವರಿದ್ದ ತಂಡ ನೇರವಾಗಿ ರೇಣುಕಾ ಮನೆಗೆ ತೆರಳಿ 50 ಸಾವಿರ ದಂಡ ವಿಧಿಸಿದ್ದಾರೆ. ನಂತರ ಯುವತಿಯಿಂದಲೇ ಕಸ ತೆಗೆಸಿ ಶಿಕ್ಷೆ ನೀಡಿದ್ದಾರೆ.