HEALTH TIPS

ಬಾಂದ್ರಾ ಟರ್ಮಿನಸ್‌ ಕಾಲ್ತುಳಿತ: 500ರಿಂದ 600 ಪ್ರಯಾಣಿಕರಿಗೆ ಪ್ರತ್ಯೇಕ ಜಾಗ

 ಮುಂಬೈ: ಬಾಂದ್ರಾ ಟರ್ಮಿನಸ್‌ನಲ್ಲಿ ಪ್ರಯಾಣಿಕರ ದಟ್ಟಣೆ ಮತ್ತು ನೂಕುನುಗ್ಗಲು ಪರಿಣಾಮಕಾರಿಯಾಗಿ ನಿರ್ವಹಿಸಲು, 500ರಿಂದ 600ರಷ್ಟು ಪ್ರಯಾಣಿಕರಿಗೆ ಆಗುವಷ್ಟು ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಕಾಲ್ತುಳಿತದಿಂದ 10 ಮಂದಿ ಗಾಯಗೊಂಡ ಘಟನೆ ನಡೆದ ಮರು ದಿನವೇ, ಪಶ್ಚಿಮ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿನೀತ್‌ ಅಭಿಷೇಕ್‌ ಈ ಮಾಹಿತಿ ನೀಡಿದ್ದಾರೆ.

ಭಾನುವಾರ ರಾತ್ರಿ 2.45ರ ಸುಮಾರಿಗೆ ಬಾಂದ್ರಾ- ಗೋರಖ್‌ಪುರ ಅಂತ್ಯೋದಯ ಎಕ್ಸ್‌ಪ್ರೆಸ್‌ ರೈಲು ಪ್ಲಾಟ್‌ಫಾರ್ಮ್‌ ಪ್ರವೇಶಿಸುತ್ತಿದ್ದಂತೆ, ಪ್ರಯಾಣಿಕರು ಹತ್ತಲು ನೂಕುನುಗ್ಗಲು ಆಗಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು. ಈ ರೈಲು ಬೆಳಿಗ್ಗೆ 5.10ಕ್ಕೆ ಹೊರಡಲಿತ್ತು. ಉತ್ತರಪರದೇಶ ಮತ್ತು ಬಿಹಾರದಲ್ಲಿ ದೀಪಾವಳಿ ಹಾಗೂ ಛಠ್‌ ಹಬ್ಬಕ್ಕೆ ಹೋಗಲು ಪ್ರಯಾಣಿಕರು ಸಾವಿರಾರು ಸಂಖ್ಯೆಯಲ್ಲಿ ಹೊರಟಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries