ಹರಿಯಾಣ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಇಂದು ಬೆಳಿಗ್ಗೆ 8ಕ್ಕೆ ಆರಂಭವಾಗಿದೆ. ಇಲ್ಲಿ ಹೊರಹೊಮ್ಮುವ ಫಲಿತಾಂಶವು ಮುಂಬರುವ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆಗಳಿಗೆ ದಿಕ್ಸೂಚಿಯಾಗುವ ಸಾಧ್ಯತೆ ಇದೆ.
ಹರಿಯಾಣದಲ್ಲಿ ದಶಕದ ಬಳಿಕ ಅಧಿಕಾರದ ಗದ್ದುಗೆ ಏರುವ ಆಸೆಯಲ್ಲಿ ಕಾಂಗ್ರೆಸ್ ಪಾಳಯ ಇದೆ.
ಕಮಲ ಪಾಳಯವು ಸತತ ಮೂರನೇ ಅವಧಿಗೆ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ. ಹರಿಯಾಣದಲ್ಲಿ ಕಾಂಗ್ರೆಸ್ ಬಹುಮತ ಪಡೆಯಲಿದೆ ಎಂದು ಹೆಚ್ಚಿನ ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದು, ಸರ್ಕಾರ ರಚನೆಯ ಭರವಸೆಯಲ್ಲಿವೆ. ರಾಜ್ಯದಲ್ಲಿ ದಶಕದ ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ತನ್ನ ನೇತೃತ್ವದ ಸರ್ಕಾರ ರಚಿಸುವ ನಿರೀಕ್ಷೆಯಲ್ಲಿದೆ. ರಾಜ್ಯದಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಸಿಗುವುದಿಲ್ಲ. ಆದರೆ, ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ.
ಐವರ ನಾಮನಿರ್ದೇಶನಕ್ಕೆ ಲೆಫ್ಟಿನೆಂಟ್ ಗವರ್ನರ್ ತೀರ್ಮಾನ
ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯ ಫಲಿತಾಂಶಕ್ಕೂ ಮೊದಲೇ ವಿಧಾನಸಭೆಗೆ ಐವರು ಸದಸ್ಯರನ್ನು ನಾಮನಿರ್ದೇಶನ ಮಾಡಲು ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ತೀರ್ಮಾನಿಸಿದ್ದು, ಈ ನಡೆಯು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಲೆಫ್ಟಿನೆಂಟ್ ಗವರ್ನರ್‌ರಿಂದ ನಾಮನಿರ್ದೇಶನ ಆಗಲಿರುವ ಐವರು ಸದಸ್ಯರು ಹೊಸ ಸರ್ಕಾರದ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಂಭವವಿದೆ. ಇದೇ ಕಾರಣದಿಂದ ಎಲ್‌ಜಿ ನಡೆಯನ್ನು ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ತೀವ್ರವಾಗಿ ವಿರೋಧಿಸಿವೆ.
ಮತ ಎಣಿಕೆಗೆ ಕ್ಷಣಗಣನೆ: ಹರಿಯಾಣ, ಜಮ್ಮು-ಕಾಶ್ಮೀರದಲ್ಲಿ ಬಿಗಿ ಭದ್ರತೆ
ನಿಜವಾಗಲಿದೆಯೇ ಮಗಗಟ್ಟೆ ಸಮೀಕ್ಷೆ ಭವಿಷ್ಯ?
ಮತ ಎಣಿಕೆ ಭರದಿಂದ ಸಾಗುತ್ತಿರುವ ದೃಶ್ಯ...
ಹರಿಯಾಣದಲ್ಲಿ ಆರಂಭಿಕ ಮುನ್ನಡೆ ಗಳಿಸಿದ ಕಾಂಗ್ರೆಸ್
ಹರಿಯಾಣ: (ಒಟ್ಟು 90, ಮ್ಯಾಜಿಕ್ ಸಂಖ್ಯೆ 46)
ಕಾಂಗ್ರೆಸ್+: 17
ಬಿಜೆಪಿ: 10
ಇತರೆ: 2
ಒಟ್ಟು 29/90
ಜಮ್ಮು-ಕಾಶ್ಮೀರದಲ್ಲಿ ನಿಕಟ ಪೈಪೋಟಿ
ಜಮ್ಮು ಮತ್ತು ಕಾಶ್ಮೀರ: (ಒಟ್ಟು 90, ಮ್ಯಾಜಿಕ್ ಸಂಖ್ಯೆ 46)
ಕಾಂಗ್ರೆಸ್+ಎನ್‌ಸಿ: 6
ಬಿಜೆಪಿ: 5
ಒಟ್ಟು 11/90
ಹರಿಯಾಣ: ಕಾಂಗ್ರೆಸ್ 24, ಬಿಜೆಪಿ 19 ಸ್ಥಾನಗಳಲ್ಲಿ ಮುನ್ನಡೆ
ಹರಿಯಾಣ, ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಬೆಳಿಗ್ಗೆ 8ಕ್ಕೆ ಆರಂಭವಾಗಿದೆ. ಆರಂಭಿಕ ಮಾಹಿತಿ ಪ್ರಕಾರ ಹರಿಯಾಣದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದ್ದು, ಜಮ್ಮು-ಕಾಶ್ಮೀರದಲ್ಲಿ ತೀವ್ರ ಪೈಪೋಟಿ ಕಂಡುಬಂದಿದೆ.
ಹರಿಯಾಣ: ಕಾಂಗ್ರೆಸ್ 30, ಬಿಜೆಪಿ 20 ಸ್ಥಾನಗಳಲ್ಲಿ ಮುನ್ನಡೆ
ಹರಿಯಾಣ, ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಇಂದು ಮಧ್ಯಾಹ್ನ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿವೆ ಎಂದು ಚುನಾವಣಾ ಆಯೋಗ ಮೂಲಗಳು ತಿಳಿಸಿವೆ.
ಹರಿಯಾಣದಲ್ಲಿ ಸ್ಪಷ್ಟ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್
ಹರಿಯಾಣ: ಮುನ್ನಡೆಯಲ್ಲಿರುವ ಪ್ರಮುಖರು
ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಭೂಪಿಂದರ್ ಸಿಂಗ್ ಹೂಡಾ ಆರಂಭಿಕ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಅಂಚೆ ಮತಗಳ ಎಣಿಕೆಗಳ ಬಳಿಕ ಇವಿಎಂ ಮತಎಣಿಕೆ ನಡೆಯಲಿದೆ. 90 ಸದಸ್ಯ ಬಲದ ಹರಿಯಾಣದಲ್ಲಿ ಶೇ 67.90ರಷ್ಟು ಮತದಾನವಾಗಿತ್ತು. 1,031 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಅಕ್ಟೋಬರ್ 5ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು.
ಜಮ್ಮು-ಕಾಶ್ಮೀರ: ಕಾಂಗ್ರೆಸ್ 39, ಬಿಜೆಪಿ 24 ಸ್ಥಾನಗಳಲ್ಲಿ ಮುನ್ನಡೆ
ಹರಿಯಾಣ, ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್ ಮುನ್ನಡೆ
ಹರಿಯಾಣ: ಆರಂಭಿಕ ಟ್ರೆಂಡ್ ಪ್ರಕಾರ ಕಾಂಗ್ರೆಸ್ 48, ಬಿಜೆಪಿ 23 ಸ್ಥಾನಗಳಲ್ಲಿ ಮುನ್ನಡೆ ಗಳಿಸಿವೆ. ಈ ಕುರಿತು ಟಿ.ವಿ ವರದಿಯನ್ನು ಉಲ್ಲೇಖಿಸಿ ಪಿಟಿಐ ತಿಳಿಸಿದೆ.
ಹರಿಯಾಣದಲ್ಲಿ ಮ್ಯಾಜಿಕ್ ಸಂಖ್ಯೆ 46 ಆಗಿದ್ದು, ಕಾಂಗ್ರೆಸ್ ಬಹುಮತದತ್ತ ಮುನ್ನಡೆದಿದೆ.
ಜಮ್ಮು-ಕಾಶ್ಮೀರ: ಆರಂಭಿಕ ಟ್ರೆಂಡ್ ಪ್ರಕಾರ ಕಾಂಗ್ರೆಸ್ 39, ಬಿಜೆಪಿ 25 ಸ್ಥಾನಗಳಲ್ಲಿ ಮುನ್ನಡೆ ಗಳಿಸಿವೆ. ಪಿಟಿಡಿ ಆರು ಮತ್ತು ಇತರರು ಮೂರು ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ.
ದೆಹಲಿಯ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಆರಂಭ: ಲಾಡು ವಿತರಣೆ, ಪಟಾಕಿ ಸಿಡಿಸಿ ಸಂಭ್ರಮ
ಜಮ್ಮು-ಕಾಶ್ಮೀರದಲ್ಲೂ ಕಾಂಗ್ರೆಸ್ ಮೈತ್ರಿಗೆ ಸಿಗಲಿದೆಯೇ ಬಹುಮತ?
ಜಮ್ಮು ಮತ್ತು ಕಾಶ್ಮೀರ: (ಒಟ್ಟು 90, ಮ್ಯಾಜಿಕ್ ಸಂಖ್ಯೆ 46)
ಕಾಂಗ್ರೆಸ್+ಎನ್‌ಸಿ: 49
ಬಿಜೆಪಿ: 28
ಪಿಡಿಪಿ: 8
ಇತರೆ: 2
ಒಟ್ಟು: 87/90
ಹರಿಯಾಣದಲ್ಲಿ ಸ್ಪಷ್ಟ ಮುನ್ನಡೆಯತ್ತ ಕಾಂಗ್ರೆಸ್
ಹರಿಯಾಣ: (ಒಟ್ಟು 90, ಮ್ಯಾಜಿಕ್ ಸಂಖ್ಯೆ 46)
ಕಾಂಗ್ರೆಸ್+: 51
ಬಿಜೆಪಿ: 33
ಐಎನ್‌ಎಲ್‌ಡಿ+: 3
ಇತರೆ: 3
ಒಟ್ಟು: 90/90
ಹರಿಯಾಣ: ಮುನ್ನಡೆಯಲ್ಲಿರುವ ಪ್ರಮುಖರು
ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ
ಭೂಪಿಂದರ್ ಸಿಂಗ್ ಹೂಡಾ (ಕಾಂಗ್ರೆಸ್)
ಅನಿಲ್ ವಿಜ್ (ಬಿಜೆಪಿ)
ಅಭಯ್ ಸಿಂಗ್ ಚೌಟಲ (ಲೋಕದಳ)
ಆದಿತ್ಯ ಸುರ್ಜೆವಾಲಾ.
ಚುನಾವಣಾ ಆಯೋಗ ಆರಂಭಿಕ ಟ್ರೆಂಡ್
ಜಮ್ಮು-ಕಾಶ್ಮೀರ: ಚುನಾವಣಾ ಆಯೋಗದ ಆರಂಭಿಕ ಟ್ರೆಂಡ್
ಹರಿಯಾಣ: ಚುನಾವಣಾ ಆಯೋಗದ ಆರಂಭಿಕ ಟ್ರೆಂಡ್
ಚುನಾವಣಾ ಆಯೋಗದ ಪ್ರಕಾರ ಜಮ್ಮು-ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ 25 ಹಾಗೂ ಕಾಂಗ್ರೆಸ್ 6 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮತ್ತೊಂದೆಡೆ ಬಿಜಿಪಿ 18 ಸ್ಥಾನಗಳಲ್ಲಿ ಮುನ್ನಡೆ ಗಳಿಸಿವೆ.
ಶ್ರೀನಗರದಲ್ಲಿ ಮತ ಎಣಿಕೆ ಪ್ರಗತಿಯಲ್ಲಿದೆ.
ಜಮ್ಮು ಕಾಶ್ಮೀರ: ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಎರಡೂ ಕ್ಷೇತ್ರಗಳಲ್ಲೂ ಮುನ್ನಡೆ ಗಳಿಸಿದ್ದಾರೆ.
ತಾಜಾ ಮಾಹಿತಿಯ ಪ್ರಕಾರ ಹರಿಯಾಣದಲ್ಲಿ ಬಿಜೆಪಿ 44 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮತ್ತೊಂದೆಡೆ ಈವರೆಗೆ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ.
ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ 5,082 ಮತಗಳ ಅಂತರದ ಮುನ್ನಡೆಯಲ್ಲಿದ್ದಾರೆ.
ಹರಿಯಾಣ: ಜುಲಾನಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಕುಸ್ತಿಪಟು ವಿನೇಶ್ ಫೋಗಟ್ 214 ಮತಗಳ ಮುನ್ನಡೆಯಲ್ಲಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಎನ್‌ಸಿ-ಕಾಂಗ್ರೆಸ್ ಮೈತ್ರಿ 46 ಸ್ಥಾನಗಳಲ್ಲಿ ಮುನ್ನಡೆ
ಜಮ್ಮು-ಕಾಶ್ಮೀರದಲ್ಲಿ ಮತ ಎಣಿಕೆ ಪ್ರಗತಿಯಲ್ಲಿದ್ದು, ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ಮೈತ್ರಿ 46 ಸ್ಥಾನಗಳಲ್ಲಿ ಮುನ್ನಡೆ ಗಳಿಸಿವೆ. ಈ ಪೈಕಿ ಎನ್‌ಸಿ 39 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಜಮ್ಮು-ಕಾಶ್ಮೀರ ಬಿಜೆಪಿ ಘಟಕದ ಅಧ್ಯಕ್ಷ ರವಿಂದರ್ ರೈನಾ, 2,797 ಮತಗಳ ಹಿನ್ನಡೆಯಲ್ಲಿದ್ದಾರೆ.
ಹರಿಯಾಣದಲ್ಲಿ ಬಿಜೆಪಿ-ಕಾಂಗ್ರೆಸ್ ನಿಕಟ ಪೈಪೋಟಿ
ಹರಿಯಾಣ: (ಒಟ್ಟು 90, ಮ್ಯಾಜಿಕ್ ಸಂಖ್ಯೆ 46)
ಕಾಂಗ್ರೆಸ್+: 36
ಬಿಜೆಪಿ: 38
ಐಎನ್‌ಎಲ್‌ಡಿ+: 1
ಬಿಎಸ್‌ಪಿ: 1
ಐಎನ್‌ಡಿ: 3
ಒಟ್ಟು: 79/90
(ಮಾಹಿತಿ ಕೃಪೆ: ಚುನಾವಣಾ ಆಯೋಗ)
ಹರಿಯಾಣದಲ್ಲಿ ಕಾಂಗ್ರೆಸ್ ಹಿಂದಿಕ್ಕಿದ ಬಿಜೆಪಿಗೆ ಮುನ್ನಡೆ...
ಮತ ಎಣಿಕೆ ಕೇಂದ್ರಕ್ಕೆ ಹೋಗುತ್ತಿದ್ದೇನೆ, ಆಮೇಲೆ ಪ್ರತಿಕ್ರಿಯಿಸುತ್ತೇನೆ: ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ
ಹರಿಯಾಣ: ಚುನಾವಣಾ ಆಯೋಗದ ಈಗಿನ ಟ್ರೆಂಡ್ ಪ್ರಕಾರ ಬಿಜೆಪಿ 43, ಕಾಂಗ್ರೆಸ್ 34 ಸ್ಥಾನಗಳಲ್ಲಿ ಮುನ್ನಡೆ
ಹರಿಯಾಣ: ಚುನಾವಣಾ ಆಯೋಗದ ಪ್ರಕಾರ ಬಿಜೆಪಿ 48, ಕಾಂಗ್ರೆಸ್ 34 ಸ್ಥಾನಗಳಲ್ಲಿ ಮುನ್ನಡೆ
ಹರಿಯಾಣ ವಿಧಾನಸಭಾ ಚುನಾವಣೆ ಫಲಿತಾಂಶ ಭಾರಿ ಕುತೂಹಲ ಕೆರಳಿಸಿದೆ. ಆರಂಭಿಕ ಟ್ರೆಂಡ್ ಪ್ರಕಾರ ಕಾಂಗ್ರೆಸ್ ಮುನ್ನಡೆ ಗಳಿಸಿತ್ತು. ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮಯಾಚರಣೆ ಕೂಡ ಆರಂಭವಾಗಿತ್ತು. ಆದರೆ ಕೆಲವೇ ಹೊತ್ತಿನಲ್ಲಿ ಟ್ರೆಂಡ್ ಬದಲಾಗಿದ್ದು, ಬಿಜೆಪಿ ಮುನ್ನಡೆ ಗಳಿಸಿದೆ. ಆ ಮೂಲಕ ಹಾವು-ಏಣಿಯಾಟ ಮುಂದುವರಿದಿದೆ. ಚುನಾವಣಾ ಆಯೋಗದ ತಾಜಾ ವರದಿಯ ಪ್ರಕಾರ ಬಿಜೆಪಿ 46, ಕಾಂಗ್ರೆಸ್ 36 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಜಮ್ಮು-ಕಾಶ್ಮೀರ: ನ್ಯಾಷನಲ್ ಕಾನ್ಪರೆನ್ಸ್ ಅತಿ ದೊಡ್ಡ ಪಕ್ಷ?
ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣಾ ಆಯೋಗದ ಈಗಿನ ಟ್ರೆಂಡ್ ಪ್ರಕಾರ ನ್ಯಾಷನಲ್ ಕಾನ್ಪರೆನ್ಸ್ ಹಾಗೂ ಕಾಂಗ್ರೆಸ್ ಮೈತ್ರಿ ಮುನ್ನಡೆ ಸಾಧಿಸಿವೆ. ಎನ್‌ಸಿ 39, ಕಾಂಗ್ರೆಸ್ 8 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ 28 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.
ಇದೇ ರೀತಿಯ ಟ್ರೆಂಡ್ ಮುಂದುವರಿದರೆ ಜಮ್ಮು-ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಗಳಿವೆ.
ಹರಿಯಾಣ: ಹಿನ್ನಡೆಯಲ್ಲಿ ವಿನೇಶ್ ಫೋಗಟ್
ಸರ್ಕಾರ ರಚಿಸುವ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕ ಭೂಪಿಂದರ್ ಹೂಡಾ
ಭೂಪಿಂದರ್ ಸಿಂಗ್ ಹೂಡಾ, ಮಾಜಿ ಮುಖ್ಯಮಂತ್ರಿಈಗಿನ ಟ್ರೆಂಡ್ ಪ್ರಕಾರ ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ. ಸಿಎಂ ಅಭ್ಯರ್ಥಿಯನ್ನು ಹೈಕಮಾಂಡ್ ನಿರ್ಧರಿಸಲಿದೆ. ಹರಿಯಾಣದಲ್ಲಿ ಕಾಂಗ್ರೆಸ್ ಅತ್ಯುತ್ತಮ ಸಾಧನೆಗೆ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಇತರೆ ನಾಯಕರು ಮತ್ತು ರಾಜ್ಯದ ಜನರಿಗೆ ಅಭಿನಂದನೆ ಸಲ್ಲಬೇಕು.ಹರಿಯಾಣದಲ್ಲಿ ಬದಲಾಯ್ತು ಟ್ರೆಂಡ್...
ಹರಿಯಾಣದಲ್ಲಿ ಆರಂಭಿಕ ಹಿನ್ನಡೆ ಬಳಿಕ ಪುಟಿದೆದ್ದಿರುವ ಬಿಜೆಪಿ ಮುನ್ನಡೆಯತ್ತ ದಾಪುಗಾಲನ್ನಿಟ್ಟಿದೆ. ಚುನಾವಣಾ ಆಯೋಗದ ಈಗಿನ ಟ್ರೆಂಡ್ ಪ್ರಕಾರ ಬಿಜೆಪಿ 47, ಕಾಂಗ್ರೆಸ್ 36 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ.