ತಿರುವನಂತಪುರ: ಆದ್ಯತಾ ಪಟ್ಟಿಯಲ್ಲಿರುವ ಪಡಿತರ ಚೀಟಿದಾರರ ಮಸ್ಟರಿಂಗ್ ಅವಧಿಯನ್ನು ಮತ್ತೆ ವಿಸ್ತರಿಸಲಾಗಿದೆ.
ಮಸ್ಟರಿಂಗ್ ಅನ್ನು ನವೆಂಬರ್ 5ರವರೆಗೆ ವಿಸ್ತರಿಸಲಾಗಿದೆ ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಜಿ.ಆರ್.ಅನಿಲ್ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಆದ್ಯತಾ ಪಡಿತರ ಚೀಟಿ ಹೊಂದಿರುವ ಶೇ.16 ರಷ್ಟು ಜನರು ಮಾತ್ರ ಮಸ್ಟರಿಂಗ್ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಯಾರಿಗೂ ಆಹಾರ ಧಾನ್ಯಗಳ ಕೊರತೆಯಾಗುವುದಿಲ್ಲ, ಆತಂಕ ಪಡುವ ಅಗತ್ಯವಿಲ್ಲ, ಎಲ್ಲರ ಮಸ್ಟರಿಂಗ್ ಪೂರ್ಣಗೊಳ್ಳುವಂತೆ ನೋಡಿಕೊಳ್ಳಲಾಗುವುದು ಎಂದು ಸಚಿವ ಜಿ.ಆರ್.ಅನಿಲ್ ಹೇಳಿರುವರು.
ಹಳದಿ ಮತ್ತು ಗುಲಾಬಿ ಕಾರ್ಡ್‍ಗಳ ಮಸ್ಟರಿಂಗ್ ಸಮಯವನ್ನು ಪರಿಷ್ಕರಿಸಲಾಗಿದೆ. ಮಸ್ಟರಿಂಗ್ ಗಡುವು ಅಕ್ಟೋಬರ್ 25 ಆಗಿತ್ತು. ಇದನ್ನು ಈಗ ನವೆಂಬರ್ 5 ರವರೆಗೆ ವಿಸ್ತರಿಸಲಾಗಿದೆ. ಆದ್ಯತೆಯ ಕಾರ್ಡ್ ಹೊಂದಿರುವವರ ಬಯೋಮೆಟ್ರಿಕ್ ಮಸ್ಟರಿಂಗ್ ಅನ್ನು ಮೊದಲ ಹಂತದಲ್ಲಿ ಸೆಪ್ಟೆಂಬರ್ 18 ರಿಂದ ಪ್ರಾರಂಭಿಸಿ ಅಕ್ಟೋಬರ್ 8 ರಂದು ಕೊನೆಗೊಳಿಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ, ಈ ಕಾಲಮಿತಿಯೊಳಗೆ ಶೇ.80ರಷ್ಟು ಕಾರ್ಡುದಾರರ ಮಸ್ಟರಿಂಗ್ ಮಾತ್ರ ಪೂರ್ಣಗೊಂಡಿದೆ. ಸುಮಾರು 20 ಪ್ರತಿಶತ ಜನರು ಮಸ್ಟರಿಂಗ್‍ಗೆ ಹಾಜರಾಗಲಿಲ್ಲ. ನಂತರ ಮಸ್ಟರಿಂಗ್ ಅನ್ನು ಅಕ್ಟೋಬರ್ 25 ರವರೆಗೆ ವಿಸ್ತರಿಸಲಾಯಿತು. ಇದಾದ ನಂತರವೂ ಸುಮಾರು ಶೇ.16ರಷ್ಟು ಮಂದಿ ಮಸ್ಟರಿಂಗ್ ಪೂರ್ಣಗೊಳಿಸಲು ಬಾಕಿಯಿದೆ ಎಂಬ ಅಂದಾಜಿನ ಮೇರೆಗೆ ಮತ್ತೆ ಸಮಯವನ್ನು ವಿಸ್ತರಿಸಲಾಗಿದೆ.