HEALTH TIPS

ಉತ್ತರ ಗಾಜಾ ಮೇಲೆ ಇಸ್ರೇಲ್ ದಾಳಿ: 60 ಮಂದಿ ಸಾವು, 17 ಜನರ ನಾಪತ್ತೆ

         ಗಾಜಾ ಪಟ್ಟಿ: ಉತ್ತರ ಗಾಜಾದಲ್ಲಿ ಸ್ಥಳಾಂತರಗೊಂಡ ಪ್ಯಾಲೆಸ್ಟೀನಿಯನ್ನರು ಆಶ್ರಯ ಪಡೆದಿದ್ದ 5 ಅಂತಸ್ತಿನ ಕಟ್ಟಡದ ಮೇಲೆ ಮಂಗಳವಾರ ಬೆಳಿಗ್ಗೆ ಇಸ್ರೇಲ್ ವಾಯು ದಾಳಿ ನಡೆಸಿದ್ದು, 60 ಮಂದಿ ಮೃತಪಟ್ಟಿದ್ದಾರೆ. ಇತರೆ 17 ಮಂದಿ ನಾಪತ್ತೆಯಾಗಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.

          ವರ್ಷಕ್ಕೂ ಅಧಿಕ ಸಮಯದಿಂದ ನಡೆಯುತ್ತಿರುವ ಇಸ್ರೇಲ್-ಗಾಜಾ ಸಂಘರ್ಷದಲ್ಲಿ ಮೃತಪಟ್ಟವರ ಸಂಖ್ಯೆ 43,000 ದಾಟಿದೆ.

        ಇಸ್ರೇಲ್ ಸಂಸತ್ತಿನಲ್ಲಿ ಸೋಮವಾರ ಎರಡು ಕಾಯ್ದೆಗಳನ್ನು ಅಂಗೀಕರಿಸಲಾಗಿದ್ದು, ಅವುಗಳು ಪ್ಯಾಲೆಸ್ಟೀನ್‌ ನಿರಾಶ್ರಿತರಿಗೆ ವಿಶ್ವಸಂಸ್ಥೆ ಕೈಗೊಂಡ ಕ್ರಮಗಳಿಗೆ ವಿರುದ್ಧವಾಗಿವೆ. ವಿಶ್ವಸಣಸ್ಥೆಯ ಯುಎನ್‌ಆರ್‌ಡಬ್ಲ್ಯುಎ ಗಾಜಾದಲ್ಲಿ ನೆರವು ನೀಡುತ್ತಿರುವ ಅತಿ ದೊಡ್ಡ ಏಜೆನ್ಸಿಯಾಗಿದೆ. ಇಸ್ರೇಲ್‌ನ ಈ ಕ್ರಮವು ವಿಶ್ವಸಂಸ್ಥೆ ಜೊತೆ ದೇಶದ ಸಂಬಂಧ ಕಡಿತಗೊಳ್ಳುವ ಜೊತೆಗೆ ಇಸ್ರೇಲ್‌ನ ವಿಶ್ವಸಂಸ್ಥೆಯ ಕೆಲಸಗಳಿಗೆ ತಡೆ ಆಗಲಿದೆ ಎಂದು ವರದಿ ತಿಳಿಸಿದ.

            ಈ ಬೆಳವಣಿಗೆ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಏಜೆನ್ಸಿಯು ಗಾಜಾ ಮತ್ತು ಇಸ್ರೇಲ್ ಆಕ್ರಮಿತ ವೆಸ್ಟ್‌ಬ್ಯಾಂಕ್‌ನಲ್ಲಿ ಮೂಲಭೂತ ನೆರವನ್ನು ಮುಂದುವರಿಸಲಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ವರದಿ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries