ಮಂಜೇಶ್ವರ: ಮಂಜೇಶ್ವರ ಸರ್ವೀಸ್ ಕೋ-ಆಪರೇಟಿವ್ ಬ್ಯಾಂಕ್‍ನಲ್ಲಿ ಪ್ರಸಕ್ತ 153.19 ಕೋಟಿ ರೂ. ಠೇವಣಿ, 2.88 ಕೋಟಿ ರೂ. ಪಾಲು ಬಂಡವಾಳ, 126.85 ಕೋಟಿ ರೂ. ಸಾಲಗಳು, 51.99 ಕೋಟಿ ರೂ. ಹೂಡಿಕೆಗಳು ಇದ್ದು ಬ್ಯಾಂಕ್ ಪ್ರಗತಿಯತ್ತ ಸಾಗುತ್ತಿದ್ದು, 2023-24 ನೇ ಸಾಲಿನಲ್ಲಿ 400 ಕೋಟಿ ರೂ.ಗಳಿಗೂ ಮೀರಿ ವ್ಯವಹಾರ ನಡೆಸಿ 61.64 ಲಕ್ಷ ರೂ. ನಿಚ್ಚಳ ಲಾಭಗಳಿಸಿದೆ. ಬ್ಯಾಂಕ್ ಈ ವರೆಗೂ ಲೆಕ್ಕಪರಿಶೋಧನೆಯಲ್ಲಿ `ಎ' ಗ್ರೇಡ್ ಮಾನ್ಯತೆ ಪಡೆಯುತ್ತಲೇ ಬಂದಿದೆ. ಸದಸ್ಯರಿಗೆ ಶೇ.11 ಡಿವಿಡೆಂಟ್ ಘೋಷಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಎಸ್.ರಾಮಚಂದ್ರ ಅವರು ತಿಳಿಸಿದರು.
ಎಸ್.ಎ.ಟಿ. ಶಾಲೆಯ ಅನಂತ ವಿದ್ಯಾಲಯದಲ್ಲಿ ನಡೆದ ಬ್ಯಾಂಕ್‍ನ 84 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬ್ಯಾಂಕ್ ಸ್ಥಾಪನೆಯಾದ ಇಷ್ಟು ವರ್ಷಗಳಲ್ಲಿ ಸಾಧಿಸಿದ ಪ್ರಗತಿಗೆ ಸಹಕರಿಸಿದ ಬ್ಯಾಂಕ್‍ನ ಠೇವಣಿದಾರರು, ಸದಸ್ಯರು, ಗ್ರಾಹಕ ಬಂಧುಗಳು, ಸಿಬ್ಬಂದಿಗಳು, ಕಮಿಷನ್ ಏಜೆಂಟ್‍ದಾರರು ಕಾರ್ಯ ಶ್ಲಾಘನೀಯ ಎಂದರು.
ಬ್ಯಾಂಕ್‍ನ ಕಾರ್ಯದರ್ಶಿ ರಾಜನ್ ನಾಯರ್ ಪಿ. ಅವರು 2023-24 ನೇ ಸಾಲಿನ ಲೆಕ್ಕಪತ್ರ ಮತ್ತು 2025-26 ನೇ ಸಾಲಿನ ಅಂದಾಜು ಬಜೆಟ್ ಸೇರಿದಂತೆ ಬ್ಯಾಂಕ್‍ನ ವಿವಿಧ ಕಾರ್ಯ ಚಟುವಟಿಕೆಯನ್ನು ಸಭೆಯಲ್ಲಿ ಮಂಡಿಸಿದರು. ಪಂಚಾಯತಿ ಮಟ್ಟದಲ್ಲಿ 2023-24 ನೇ ವರ್ಷದಲ್ಲಿ ಎಲ್ಲಾ ವಿಷಯದಲ್ಲಿ ಎ ಪ್ಲಸ್ ಪಡೆದ ಒಟ್ಟು 14 ಎಸ್‍ಎಸ್‍ಎಲ್‍ಸಿ ಹಾಗು ಪ್ಲಸ್ ಟು ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು.
ಬ್ಯಾಂಕ್ ಠೇವಣಾತಿಗಳಿಗೆ ಅತ್ಯಾಕರ್ಷಕ ಬಡ್ಡಿ ನೀಡುತ್ತಿದ್ದು, ಹಿರಿಯ ನಾಗರಿಕರಿಗೆ ಶೇ.0.5 ರಷ್ಟು ಹೆಚ್ಚುವರಿ ಬಡ್ಡಿ ನೀಡುತ್ತಿದೆ. ಬ್ಯಾಂಕ್ ತನ್ನ 6 ಶಾಖೆಗಳ ಮುಖಾಂತರ ಸಮಾಜದಲ್ಲಿನ ಹಿಂದುಳಿದ ಮತ್ತು ದುರ್ಬಲ ಜನ ಸಮೂಹಕ್ಕೆ ಆರ್ಥಿಕ ನೆರವು ಮತ್ತು ವಿವಿಧ ಬಗೆಯ ಬ್ಯಾಂಕಿಂಗ್ ಸೌಲಭ್ಯವನ್ನು ನೀಡುತ್ತಿದೆ.
ಉಪಾಧ್ಯಕ್ಷ ವಿಜಯ ಕೆ, ನಿರ್ದೇಶಕರಾದ ಡಾ.ಕೆ.ಎ.ಖಾದರ್, ಯತೀಶ ಕೆ, ಗಣೇಶ ಸಿ.ಎಚ್, ರಾಮಚಂದ್ರ ಕೆ, ಗಂಗಾಧರ ಕೆ.ಕೆ, ರೇಖಾ, ಸೇಸಮ್ಮ ಮತ್ತು ನಾರಾಯಣಿ ಉಪಸ್ಥಿತರಿದ್ದರು.
ಸಭೆಯಲ್ಲಿ ಕಳೆದ ವರ್ಷ ಅಗಲಿದ ಬ್ಯಾಂಕ್‍ನ ಮಾಜಿ ಅಧ್ಯಕ್ಷ ದಿ.ಬಿ.ವಿ.ರಾಜಗೋಪಾಲ ಅವರಿಗೂ ಹಾಗು ದಿ.ಬಿ.ಎಂ.ಅನಂತ ಅವರಿಗೆ, ಇತರ ಸದಸ್ಯರಿಗೂ ಶ್ರದ್ಧಾಂಜಲಿ ಅರ್ಪಿಸಲಾಯಿತು. ಉಪಾಧ್ಯಕ್ಷ ವಿಜಯ ಕೆ. ಅವರು ವಂದಿಸಿದರು.