HEALTH TIPS

ಏಕಕಾಲದಲ್ಲಿ 650 ಗಾಯಕರ ಒಕ್ಕೊರಲ ಗಾಯನದಲ್ಲಿ ರಂಜಿಸಿದ ಭಕ್ತಿರಸ ಶಿಬಿರ

ಕುಂಬಳೆ: ಕಾಸರಗೋಡಿನ ಪ್ರಸಿದ್ಧ ಕಲಾಸಂಸ್ಥೆ ರಂಗಚಿನ್ನಾರಿಯ ಸಾರಥ್ಯದಲ್ಲಿ ಸ್ಥಳೀಯ ಭಕ್ತಿರಸ ಸಮಿತಿಯ ಸಮರ್ಥ ಸಹಯೋಗದಲ್ಲಿ, ಕರ್ನಾಟಕ ಸಂಸ್ಕøತಿ ಇಲಾಖೆ ನೆರವಿನೊಂದಿಗೆ ಅಂತರಾಷ್ಟ್ರೀಯ ಖ್ಯಾತಿಯ ಗಾಯಕ  ಶಂಕರ ಶಾನುಭೋಗ್ ಕಳಸ ಇವರ ನೇತೃತ್ವದಲ್ಲಿ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಭಕ್ತಿ-ಭಾವಗೀತೆಗಳ ಕಲಿಕಾ ಕಾರ್ಯಾಗಾರದ ಸಮಾರೋಪ ಜರಗಿ ಕಾರ್ಯಾಗಾರ ಅಭೂತಪೂರ್ವ ಯಶಸ್ವಿಯಲ್ಲಿ ಪರಿಸಮಾಪ್ತಿಗೊಂಡಿತು. 


ಸಭೆಯಲ್ಲಿ ಸಮಾರೋಪ ಭಾಷಣಗೈದ ಖ್ಯಾತ ಪತ್ರಕರ್ತ ಹಾಗೂ ಅಂಕಣಕಾರ ರವೀಂದ್ರ ಜೋಶಿ ಮೈಸೂರು ಅವರು ರಂಗಚಿನ್ನಾರಿ ಹಾಗೂ ಭಕ್ತಿರಸ ಸಮಿತಿಯ ಕಾರ್ಯವೈಖರಿಯನ್ನು ಶ್ಲಾಘಿಸಿ, ಇಂತಹ ಕಾರ್ಯಕ್ರಮಗಳು ದೇಶದ ನಾನಾ ಮೂಲೆಯಲ್ಲಿ ಜರಗಬೇಕು ಎಂದು ಕರೆನೀಡಿದರು. 


ಭಕ್ತಿರಸ ಸಮಿತಿಯ ಕಾರ್ಯಾಧ್ಯಕ್ಷ ಕಲಾರತ್ನ ಶಂನಾಡಿಗ ಕುಂಬ್ಳೆ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಖ್ಯಾತ ಜಲತರಂಗ ವಾದಕಿ ವಿಜಯಲಕ್ಷ್ಮಿ ಹರಿಪ್ರಕಾಶ್ ಬೆದ್ರಡಿ ಭಾಗವಹಿಸಿದ್ದರು. ಸಭೆಯಲ್ಲಿ ಖ್ಯಾತ ಸಂಕೀರ್ತನಕಾರ, ಭಜನಾಪಟು ರಂಗನಾಯಕ್ ಕುಂಬ್ಳೆ ಹಾಗೂ ಪ್ರಸಿದ್ಧ ಸಂಗೀತ ಶಿಕ್ಷಕಿ ಸಾವಿತ್ರಿ ಭಟ್ ದೊಡ್ಡಮಾಣಿ ಅವರನ್ನು ಸನ್ಮಾನಿಸಲಾಯಿತು. ಭಾಗವಹಿಸಿದ ಶಿಬಿರಾರ್ಥಿಗಳ ಪೈಕಿ ಆರಿಸಿದ ವ್ಯಕ್ತಿಗಳಿಗೆ ಶಿಬಿರ ಶಿಕ್ಷಕ ಶಂಕರ ಶಾನುಭೋಗ್ ಅವರು ಸಾಂಕೇತಿಕವಾಗಿ ಪ್ರಮಾಣಪತ್ರವನ್ನು ವಿತರಿಸಿದರು. ಕಾರ್ಯಕ್ರಮದ ನಿರ್ವಹಣೆಗಾಗಿ ಭಕ್ತಿರಸ ಸಮಿತಿ ಎನ್ನುವ ಸ್ಥಳೀಯರ ಸಮಿತಿಯೊಂದನ್ನು ರಚಿಸಲಾಗಿದ್ದು, ಸಮಿತಿಯ ಸದಸ್ಯರು ಶಂಕರ ಶಾನುಭೋಗರನ್ನು ಸನ್ಮಾನಿಸಿದರು. ಕಾಸರಗೋಡಿ ಚಿನ್ನಾ ಸ್ವಾಗತಿಸಿ, ಸಂಧ್ಯಾ ಕೇಶವ ಅಡಿಗ ವಂದಿಸಿದರು. ಶ್ರೀನಿವಾಸ ಕಳತ್ತೂರು ಕಾರ್ಯ ನಿರ್ವಹಿಸಿದರು. ಕಾಸರಗೋಡು ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಸುಮಾರು 650 ಮಂದಿ ಶಿಬಿರಾರ್ಥಿಗಳು ಕಲಿಕಾ ಶಿಬಿರದಲ್ಲಿ ಭಾಗವಹಿಸಿದ್ದರು. ಶಿಬಿರ ಶಿಕ್ಷಕ ಶಂಕರ ಶಾನುಭೋಗ ಅವರು ಕಲಿಸಿದ, ’ನಾರಾಯಣ ನಿನ್ನ ನಾಮದ ಸ್ಮರಣೆಯ..’, ’ಹೂ ಬೇಕೇ ಪರಿಮಳದಾ..’,ಎಂಬೆರಡು ಭಕ್ತಿ ಗೀತೆಗಳು, ”ಜಿಪುಣ ಅಂದ್ರೆ ಜಿಪುಣ ಈ ಕಾಲ’ ಎಂಬ ಭಾವಗೀತೆ ಹಾಗೂ ಶಿಶುನಾಳ ಶರೀಫರ ’ತರವಲ್ಲ ತಗಿ ನಿನ್ನ ತಂಬೂರಿ’ ಎಂಬ ಜಾನಪದ ಗೀತೆ ಸಹಿತ ನಾಲ್ಕು ಗೀತೆಗಳನ್ನು ಶಿಬಿರಾರ್ಥಿಗಳು ಒಕ್ಕೊರಲಿನಲ್ಲಿ ಸ್ವರ ಲಯ ತಾಳಬದ್ಧವಾಗಿ ಹಾಡುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು. ಪಾಲ್ಗೊಂಡ 650 ಮಂದಿ ಶಿಬಿರಾರ್ಥಿಗಳು ಬೆಳಗ್ಗೆ 10 ರಿಂದ ಸಂಜೆ 5-30ರ ತನಕ ಶಿಬಿರ ಸ್ಥಾನದಲ್ಲಿ ಸಭ್ಯರಾಗಿ ಉಪಸ್ಥಿತರಿದ್ದದ್ದೂ ಇತಿಹಾಸವಾಯಿತು. ಕಾರ್ಯಕ್ರಮ ಯಶಸ್ಸಿಗೆ ಕಾರಣೀಕರ್ತರಾದ ಎಲ್ಲಾ ಶಿಬಿರಾರ್ಥಿಗಳಿಗೂ ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಹಾಗೂ ಭಕ್ತಿರಸ ಸಮಿತಿಯ ಕಾರ್ಯಾಧ್ಯಕ್ಷ ಕಲಾರತ್ನ ಶಂನಾಡಿಗರು ಅಭಿನಂದನೆ ಸಲ್ಲಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries