ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಸಾಂಸ್ಕೃತಿಕ ಘಟಕ, ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯ, ವಿಸ್ಡಮ್ ಇನ್‍ಸ್ಟಿಟ್ಯೂಟ್ ನೆಟ್ವರ್ಕ್ ಹಾಗೂ ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆಯ ಜಂಟಿ ಆಶ್ರಯದಲ್ಲಿ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ ಕಾರ್ಯಕ್ರಮ ಅ.6ರಂದು ಮಧ್ಯಾಹ್ನ 1.30ರಿಂದ ಪಾಂಗೋಡು ಕ್ಷೇತ್ರದ 'ಶ್ರೀ ದುಗಾರ್ಂಬಾ ವೇದಿಕೆ'ಯಲ್ಲಿನಡೆಯಲಿದೆ.
ಅಪರಾಹ್ನ 1.30ರಿಂದ ಶಾಂತಾ ಕುಂಟಿನಿ ಸಾರಥ್ಯದ ಉಪ್ಪಿನಂಗಡಿಯ ಸತ್ಯ ಶಾಂತ ಪ್ರತಿಷ್ಠಾನದ ಸದಸ್ಯರಿಂದ 'ಗಾನಲಹರಿ' ಕಾರ್ಯಕ್ರಮ ನಡೆಯಲಿದೆ. 2.15ರಿಂದ ನಡೆಯುವ ಕಾಸರಗೋಡು ದಸರಾ ಕವಿಗೋಷ್ಟಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಕವಿ ವಿ ಬಿ ಕುಳಮರ್ವ ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ ಸಮಿತಿಯಿಂದ ವಿ ಬಿ ಕುಳಮರ್ವ- ಲಲಿತಾಲಕ್ಷ್ಮೀ ಕುಳಮರ್ವ ದಂಪತಿಗೆ 'ಕಾಸರಗೋಡು ದಸರಾ ಸನ್ಮಾನ' ನಡೆಯಲಿದೆ. ನಾಡಿನ ಖ್ಯಾತ ಸಾಹಿತಿಗಳಾದ ಡಾ. ಕೆ. ಜಿ. ವೆಂಕಟೇಶ್ ಶಿವಮೊಗ್ಗ , ಡಾ. ಕೊಳಚಪ್ಪೆ ಗೋವಿಂದ ಭಟ್, ಪಿ. ವಿ. ಪ್ರದೀಪ್ ಕುಮಾರ್ ಮಂಗಳೂರು, ರಾಧಾಕೃಷ್ಣ ಕೆ ಉಳಿಯತ್ತಡ್ಕ, ಲಕ್ಷ್ಮಿ ವಿ ಭಟ್, ಜಯಾನಂದ ಪೆರಾಜೆ, ನಾಟಕ ಭಾರ್ಗವ ಕೆಂಪರಾಜು, ವಿರಾಜ್ ಅಡೂರು, ಸೀತಾಲಕ್ಷ್ಮಿ ವರ್ಮ ವಿಟ್ಲ, ಶಾಂತಾ ಪುತ್ತೂರು, ರತ್ನಾ ಕೆ ಭಟ್, ತಲಂಜೇರಿ, ಶ್ರೀಹರಿ ಭಟ್ ಪೆಲ್ತಾಜೆ, ಇವರಿಗೆ ಕಾಸರಗೋಡು ದಸರಾ "ಕವಿ ಶ್ರೇಷ್ಠ ಪ್ರಶಸ್ತಿ 2024 ಪ್ರದಾನ ಮಾಡಲಾಗುವುದು. ನಂತರ ಕವಿಗೋಷ್ಟಿ ನಡೆಯುವುದು.
ಕಾರ್ಯಕ್ರಮದ ಅಂಗವಾಗಿ ಕಾಸರಗೋಡು ಜಿಲ್ಲೆಯ ಪದವಿ ಕಾಲೇಜಿನ ಆಯ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 'ಭರವಸೆಯ ಬೆಳಕು-2024' ಗೌರವ ಪ್ರದಾನ ನಡೆಯಲಿದೆ. ಅಭಿಲಾಷ್ ಕ್ಷತ್ರಿಯ ಗೌರವ ಪ್ರದಾನ ಮಾಡುವರು.