ಮಲಪ್ಪುರಂ: ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ 50 ವರ್ಷದ ವ್ಯಕ್ತಿಯೊಬ್ಬನಿಗೆ 35 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂ.ದಂಡ ವಿಧಿಸಲಾಗಿದೆ. ಮಲಪ್ಪುರಂನ ಪೂಕೊಟ್ಟುಂಪದಂನ ತೊಟ್ಟುಂಗಲ್ ನಿವಾಸಿ ರಾಜನ್ ಎಂಬಾತನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಪ್ರಕರಣವನ್ನು ಆಧರಿಸಿದ ಘಟನೆಯು ಜನವರಿ 2023 ರಲ್ಲಿ ನಡೆದಿತ್ತು. ಆರೋಪಿ ಮಗುವಿನ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿದ್ದ.
ಮಗುವಿದ್ದ ಮನೆಯಲ್ಲಿಯೇ ಅತ್ಯಾಚಾರ ಎಸಗಿ ಅಪಹರಣ ಮಾಡಲಾಗಿತ್ತು. ಒಂದು ವರ್ಷದ ವಿಚಾರಣೆ ಬಳಿಕ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ನಿಲಂಬೂರು ತ್ವರಿತಗತಿ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಿದೆ.