ಪತ್ತನಂತಿಟ್ಟ: ಶಬರಿಮಲೆ ವರ್ಚುವಲ್ ಕ್ಯೂ ಮೂಲಕ ಪ್ರತಿದಿನ 70000 ಯಾತ್ರಾರ್ಥಿಗಳು ಬುಕ್ ಮಾಡಬಹುದು. ವರ್ಚುವಲ್ ಕ್ಯೂ ಮೂಲಕ 80000 ಜನರು ಬುಕ್ ಮಾಡಬಹುದು ಎಂದು ಈ ಹಿಂದೆ ಘೋಷಿಸಲಾಗಿತ್ತು.
ಸ್ಪಾಟ್ ಬುಕಿಂಗ್ ಅನ್ನು ಪರಿಚಯಿಸಿರುವುದು ಹೊಸ ವ್ಯವಸ್ಥೆಯಾಗಿದೆ. ದಟ್ಟಣೆ ಹೆಚ್ಚಾದಂತೆ, ವರ್ಚುವಲ್ ಕ್ಯೂ ಸಂಖ್ಯೆಯನ್ನು ಹೆಚ್ಚಿಸುವ ಸಾಧ್ಯತೆಯಿದ್ದು, ಅದನ್ನು ಬದಲಾಯಿಸಬೇಕೆ ಎಂದು ನಿರ್ಧರಿಸಲಾಗುತ್ತದೆ.
ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಪ್ರತಿಕ್ರಿಯಿಸಿ, ಕಳೆದ ಬಾರಿಯ ಜನದಟ್ಟಣೆ ಗಮನದಲ್ಲಿಟ್ಟುಕೊಂಡು ನಿರ್ಬಂಧ ಹೇರಲಾಗಿದೆ. ದಿನಕ್ಕೆ 70000 ಜನರಿಗೆ ಪ್ರವೇಶವಿದೆ. ಉಳಿದ 10,000 ಭಕ್ತರಿಗೆ ಏನು ಮಾಡಬೇಕು ಎಂದು ಯೋಚಿಸಿ ನಿರ್ಧರಿಸಲಾಗುವುದು. ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಯಾವುದೇ ಭಕ್ತರು ದರ್ಶನ ಪಡೆಯದೆ ವಾಪಸ್ ಹೋಗುವ ಸನ್ನಿವೇಶ ಇರದು ಎಂದು ಸ್ಪಷ್ಟಪಡಿಸಿದರು.
ಮಂಡಲ ತೆರೆಯುವ ಮುನ್ನವೇ ನಿರ್ಧಾರ ಕೈಗೊಳ್ಳಲಾಗುವುದು. ನಿನ್ನೆ ತುಲಾ ಮಾಸದ ಪೂಜೆಗೆ ಗರ್ಭಗುಡಿ ತೆರೆದಾಗ ಉತ್ತಮ ನೂಕು ನುಗ್ಗಲು ಕಂಡು ಬಂದಿದ್ದು, ಈ ನೂಕುನುಗ್ಗಲು ಸಹಜ ಎಂದು ಪಿ.ಎಸ್.ಪ್ರಶಾಂತ್ ತಿಳಿಸಿದರು.
ಇಂದು(ಗುರುವಾರ)ಮೇಲ್ಶಾಂತಿಗಳ ಆಯ್ಕೆ ನಡೆಯಲಿದೆ. ಶಬರಿಮಲೆ ಮೇಲ್ಶಾಂತಿಯಾಗಿ 24 ಮತ್ತು ಮಾಳಿಗಪ್ಪುರಂ ಮೇಲ್ಶಾಂತಿಯಾಗಿ 15 ಮಂದಿ ಅಂತಿಮ ಪಟ್ಟಿಯಲ್ಲಿದ್ದಾರೆ. ನ್ಯಾಯಾಲಯದ ಆದೇಶದಂತೆ ಶಬರಿಮಲೆ ಮೇಲ್ಶಾಂತಿ ಡ್ರಾದಿಂದ ಯೋಗೇಶ್ ನಂಬೂದಿರಿ ಅವರನ್ನು ಹೊರಗಿಡಲಾಗಿದೆ.
ಏತನ್ಮಧ್ಯೆ, ಶಬರಿಮಲೆ ಸ್ಪಾಟ್ ಬುಕ್ಕಿಂಗ್ ನಿಲ್ಲಿಸುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ರಾಜ್ಯ ಸರ್ಕಾರ ಮತ್ತು ದೇವಸ್ವಂ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ.