'ಭಾರತದಲ್ಲಿ 2024ರ ನೈರುತ್ಯ ಮುಂಗಾರು ಸೋಮವಾರಕ್ಕೆ ಮುಕ್ತಾಯಗೊಂಡಿದ್ದು, ಈ ಬಾರಿ ವಾಡಿಕೆಗಿಂತ ಅಧಿಕ ಮಳೆ ಸುರಿದಿದೆ. ಈ ಅವಧಿಯಲ್ಲಿ ದೇಶದಲ್ಲಿ 93.48 ಸೆಂ.ಮೀ ನಷ್ಟು ಮಳೆಯಾಗಿದೆ. ಇದು 2020ರಿಂದ ಈಚೆಗಿನ ದಾಖಲೆ ಮಳೆ ಪ್ರಮಾಣ' ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಜೂನ್ ಹೊತ್ತಿಗೆ ದೇಶದಲ್ಲಿ ಶೇ 11ರಷ್ಟು ಮಳೆ ಕೊರತೆಯಾಗಿತ್ತು. ಜುಲೈ ಹೊತ್ತಿಗೆ ಈ ಕೊರತೆ ಪ್ರಮಾಣವು ಶೇ 9ಕ್ಕೆ ಇಳಿಕೆಯಾದರೆ, ಆಗಸ್ಟ್ ಹೊತ್ತಿಗೆ ಶೇ 15.7ರಷ್ಟಾಯಿತು. ಸೆಪ್ಟೆಂಬರ್ ಹೊತ್ತಿಗೆ ಕೊರತೆ ಪ್ರಮಾಣವು ಶೇ 10.6ಕ್ಕೆ ಇಳಿಕೆಯಾಯಿತು.