ಕಣ್ಣೂರು: ಕಣ್ಣೂರು ಕ್ರೀಡಾ ಹಾಸ್ಟೆಲ್‍ನ 85ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಷಾಹಾರ ಬಾಧೆ ಬಾಧಿಸಿ ಆಸ್ಪತ್ರೆಗೆ ದಾಖಲಾದ ಘಟನೆ ಮತ್ತೆ ನಡೆದಿದೆ. ಶುಕ್ರವಾರ ಮಧ್ಯಾಹ್ನದಿಂದ ರಾತ್ರಿಯವರೆಗೆ ವಿವಿಧ ಸಮಯಗಳಲ್ಲಿ ವಿದ್ಯಾರ್ಥಿಗಳು ಚಿಕಿತ್ಸೆಗೆ ದಾಖಲಾಗಿರುವರು. ಮಧ್ಯಾಹ್ನದ ಊಟದ ಜೊತೆ ಮೀನು ಸೇವಿಸಿದವರಿಗೆ ಆಹಾರ ವಿಷವಾಗಿ ಅಸ್ವಸ್ಥರಾದರು.
ಇದೇ ವೇಳೆ ಮಕ್ಕಳ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ. ತೀವ್ರತರವಾದ ರೋಗಲಕ್ಷಣಗಳಿಂದಾಗಿ ನಾಲ್ಕು ಮಕ್ಕಳಿಗೆ ಎಕೆಜಿ ನೀಡಲಾಗಿದೆ.
ತಲೆ ನೋವು ಕಾಣಿಸಿಕೊಂಡು ದೇಹದ ಮೇಲೆ ಕೆಂಪು ತುರಿಕೆ ಕಾಣಿಸಿಕೊಂಡಿದ್ದ ಮಗುವನ್ನು ಕೇರ್ ಟೇಕರ್ ರಮ್ಯಾ ರಾಜೀವನ್ ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಇದಾದ ನಂತರ ತಲೆ ನೋವು, ಸುಸ್ತು ಕಾಣಿಸಿಕೊಂಡಿದ್ದರಿಂದ ಶಾಲೆಯ ಹೆಚ್ಚಿನ ಮಕ್ಕಳು ಚಿಕಿತ್ಸೆಗೆ ಒಳಗಾಗಬೇಕಾಯಿತು. ಅವರಿಗೆ ಅಲರ್ಜಿ ಗುಳ್ಳೆಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಊಟದ ಜೊತೆ ತಿಂದ ಮೀನಿಗೆ ವಿಷಾಂಶ ಉಂಟಾಗಿರಬಹುದು ಎಂಬುದು ಪ್ರಾಥಮಿಕ ತೀರ್ಮಾನ.
ಆಹಾರ ಸುರಕ್ಷತಾ ಇಲಾಖೆ ಮತ್ತು ಪಾಲಿಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಸ್ಟೆಲ್‍ಗೆ ಆಗಮಿಸಿ ಆಹಾರದ ಮಾದರಿಗಳನ್ನು ಪರೀಕ್ಷೆಗೆ ಸಂಗ್ರಹಿಸಿದ್ದಾರೆ.