ಮುಳ್ಳೇರಿಯ: ಶಿವಳ್ಳಿ ಬ್ರಾಹ್ಮಣ ಸಮಾಜ ಏತಡ್ಕ ವಲಯದವರಿಂದ ಮುನಿಯೂರು ಹರಿನಾರಾಯಣ ನಡುವಂತಿಲ್ಲಾಯರ ಮನೆಯಲ್ಲಿ ಡಾ.ಪುಂಡೂರು ವೆಂಕಟರಾಜ ಪುಣಿಂಚತ್ತಾಯ ರ 88 ನೇ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು. ಶಿವಳ್ಳಿ ಬ್ರಾಹ್ಮಣ ಸಮಾಜದ ಕೇಂದ್ರ ಸಮಿತಿ ರಕ್ಷಾಧಿಕಾರಿ ಸೀತರಾಮ ಕುಂಜತ್ತಾಯರು ಕಾರ್ಯಕ್ರಮ ವನ್ನು ಉದ್ಘಾಟಿಸಿ ಪುಣಿಂಚತ್ತಾಯರು ಮಾಡಿದ ಸಾಧನೆಗೆ ಗೌರವವನ್ನು ನೀಡಬೇಕು ಎಂದರು.
ಸಭಾಧ್ಯಕ್ಷರಾದ ಶ್ರೀನಿವಾಸ ಅಮ್ಮಣ್ಣಾಯರು ಅಧ್ಯಕ್ಷರು ಶಿವಳ್ಳಿ ಬ್ರಾಹ್ಮಣ ಸಮಾಜ ಏತಡ್ಕ ವಲಯ,ಮುನಿಯೂರು ಶ್ರೀದರ ನಡುವಂತಿಲ್ಲಾಯ ,ವಿಜಯರಾಜ ಪುಣಿಂಚತ್ತಾಯ ಕವಿ, ಶಿವಳ್ಳಿ ಬ್ರಾಹ್ಮಣ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾವತಿ ರು ಉಪಸ್ಥಿತರಿದ್ದರು.
ಕುಮಾರಿ ಅನಘ ಮತ್ತು ಆಶಿತ ಪ್ರಾರ್ಥನೆಯನ್ನು ಮಾಡಿದರು. ಈ ಸಂಧರ್ಭದಲ್ಲಿ ಪುಣಿಂಚತ್ತಾಯರು ಬರೆದ ತುಳು ಹಾಡನ್ನು ಕೇಂದ್ರ ಸಮತಿ ಉಪಾಧ್ಯಕ್ಷೆ ಶ್ರೀಮತಿ ಸೀತಾರತ್ನ ಪುಣಿಂಚತ್ತಾಯ, ನಳಿನಿ ಅನಲತ್ತಾಯ,ಕೇಂದ್ರ ಸಮಿತಿ ಕೋಶಾಧಿಕಾರಿ ಶ್ರೀಮತಿ ಸೀಮಾ ಬಳ್ಳುಳಾಯ,ಪ್ರಭಾವತಿ ಕೆದಿಲಾಯರು ಹಾಡಿದರು.
ಶಿವಳ್ಳಿ ಬ್ರಾಹ್ಮಣ ಸಮಾಜ ಕೋಶಾಧಿಕಾರಿ ಶ್ರೀಮತಿ ಪಾರ್ವತಿ ಕುಂಜತ್ತಾಯರು ನಿರೂಪಣೆ ಮಾಡಿದರು. ಹರಿನಾರಾಯಣ ನಡುವಂತಿಲ್ಲಾಯರು ಸ್ವಾಗತಿಸಿ ಶ್ರೀಮತಿ ಗೀತಾ ಕುಂಜತ್ತಾಯರು ವಂದಿಸಿದರು.