ಬದಿಯಡ್ಕ: ಕನ್ನೆಪ್ಪಾಡಿ ಆಶ್ರಯ ಆಶ್ರಮದ ಸಂಸ್ಥಾಪಕಿ ದಿ. ಶಾರದಾ ಟೀಚರ್ ಇವರ 8ನೇ ವರ್ಷದ ಪುಣ್ಯತಿಥಿ, ಸಂಸ್ಮರಣಾ ಕಾರ್ಯಕ್ರಮ ಬುಧವಾರ ನಡೆಯಿತು.
ಆಶ್ರಮದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಮೇಶ್ ಶೆಣೈ`, ಉದ್ಯಮಿ ಸತೀಶ್ ಎಡನೀರು, ಸವಿತಾ ಟೀಚರ್, ಬ್ಲಾಕ್ ಪಂಚಾಯಿತಿ ಸದಸ್ಯೆ ಅಶ್ವಿನಿ ನೀರ್ಚಾಲು, ಗ್ರಾಮಪಂಚಾಯಿತಿ ಸದಸ್ಯೆ ಸ್ವಪ್ನ ಉಪಸ್ಥಿತರಿದ್ದರು. ಶ್ರೀಕೃಷ್ಣ ಭಟ್ ಪುದುಕೋಳಿ ಅಧ್ಯಕ್ಷತೆ ವಹಿಸಿದ್ದರು. ರಮೇಶ್ ಕಳೇರಿ ಸ್ವಾಗತಿಸಿ, ಗಣಪತಿ ಪ್ರಸಾದ್ ಕುಳವರ್ಮ ವಂದಿಸಿದರು.