ಕಾಸರಗೋಡು: ಬ್ಯಾಂಕಿಗೆ ನಕಲಿ ದಾಖಲೆ ಸಲ್ಲಿಸಿ 9.5ಲಕ್ಷ ರೂ. ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಎಂಟು ಮಂದಿ ವಿರುದ್ಧ ವಿದ್ಯಾನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನೆಕ್ರಾಜೆ ಪಿಲಿಕೂಡ್ಲು ನಿವಾಸಿ ಹನೀಫ, ಪಿ.ಎ ಶಿಹಾಬ್, ಅಬ್ದುಲ್ ಹಾರಿಸ್, ಆಲಂಗೋಡು ಹೌಸಿನ ರಸಿಯಾ, ಎನ್. ಮಹಮ್ಮದ್‍ಹನೀಫ್, ನಿಯಾಸ್, ಎ.ಕೆ ಸಫ್ವಾನಾ, ಅಬ್ದುಲ್ ಹಾರಿಫ್ ಎಂಬವರಿಗೆ ಈ ಕೇಸು.
ಕೇರಳ ಗ್ರಾಮೀಣ ಬ್ಯಾಂಕ್ ಎಡನೀರು ಶಾಖೆ ಪ್ರಬಂಧಕಿ ಸೋನಿರೇಶ್ಮಾ ಅವರ ದಊರಿನ ಮೇರೆಗೆ ಈ ಕೇಸು ದಾಖಲಾಗಿದೆ. 2019 ಜುಲೈ 16ರಿಂದ ನ. 5ರ ವರೆಗಿನ ವಿವಿಧ ಕಾಲಾವಧಿಯಲ್ಲಿ ನಕಲಿ ದಾಖಲೆ ಸಲ್ಲಿಸಿ ಇವರು ಸಾಲ ಪಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.