ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವ 95 ಪ್ರತಿಶತದಷ್ಟು ಜನರು ಹೃದಯಾಘಾತದಿಂದಲೇ ಮೃತಪಡುತ್ತಾರೆ. ಹೃದಯಾಘಾತವನ್ನು ಪತ್ತೆಹಚ್ಚಲು ವೈದ್ಯರು ಸಾಮಾನ್ಯವಾಗಿ ಆಂಜಿಯೋಗ್ರಫಿಯನ್ನು ಶಿಫಾರಸು ಮಾಡುತ್ತಾರೆ.ಈ ಪರೀಕ್ಷೆಯ ನಂತರ ಹಾರ್ಟ್ ಬ್ಲೋಕೆಜ್ ಅನ್ನು 70, 80 ಅಥವಾ 90 ಹೀಗೆ ಶೇಕಡಾವಾರಿನಲ್ಲಿ ಹೇಳಲಾಗುತ್ತದೆ.
ಬ್ಲೋಕೆಜ್ ಇದ್ದರೆ ಹೃದಯಾಘಾತವಾಗುವ ಅಪಾಯ ಕೂಡಾ ಹೆಚ್ಚು.
ಹೃದಯದಲ್ಲಿ ಶೇ. 95 ರಷ್ಟು ಹಾರ್ಟ್ ಬ್ಲೋಕೆಜ್ ಇದ್ದಾಗ ದೇಹದಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಎದೆಯಲ್ಲಿ ಭಾರದ ಭಾವನೆ :
ಹೃದಯದ ಅಪಧಮನಿಗಳ ಬ್ಲೋಕೆಜ್ ಇದ್ದಾಗ ಎದೆ ಭಾರವಾದಂತೆ ಆಗುತ್ತದೆ. ಎದೆ ಬಿಗಿ ಹಿಡಿದ ಹಾಗೆ ಆಗುತ್ತದೆ. ಬಹುತೇಕ ಮಂದಿ ಹೀಗಾದಾಗ ಸಾಮಾನ್ಯ ಎಂದು ಸುಮ್ಮನಾಗುತ್ತಾರೆ. ಇದು ಸಾಮಾನ್ಯವಲ್ಲ.ಹಾರ್ಟ್ ಬ್ಲೋಕೇಜ್ ಅತಿಯಾಗಿ ಆದಾಗ ಹೀಗಾಗುತ್ತದೆ.
ಎದೆ ನೋವು :
ಹೃದಯಾಘಾತದ ಸಂದರ್ಭದಲ್ಲಿ,ರೋಗಿಗಳು ತೀವ್ರವಾದ ಎದೆ ನೋವು ಅನುಭವಿಸುತ್ತಾರೆ. ಈ ಸ್ಥಿತಿಯಲ್ಲಿ,ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ಸಂಭವಿಸುವುದಿಲ್ಲ. ಇದರಿಂದಾಗಿ ಎದೆ ನೋವು ಕಾಣಿಸಿಕೊಳ್ಳುತ್ತದೆ. ಆಗ ಎದೆ ಬಿಗಿತ ಮತ್ತು ಹೆದರಿಕೆಯಾಗುವ ಹಾಗೆ ಆಗುತ್ತದೆ.
ಉಸಿರಾಟದ ತೊಂದರೆ :
ಹೃದಯಾಘಾತದ
ಸಂದರ್ಭದಲ್ಲಿ,ರೋಗಿಗಳ ದೇಹದಲ್ಲಿ ಆಮ್ಲಜನಕದ ಕೊರತೆ ಇರುತ್ತದೆ.ಹೀಗಾದಾಗ ತೀವ್ರವಾದ ಉಸಿರಾಟದ ತೊಂದರೆ ಅನುಭವಿಸಬಹುದು. ಉಸಿರಾಡುವುದಕ್ಕೆ ತೊಂದರೆಯಗುತ್ತಿದ್ದರೆ ನಿರ್ಲಕ್ಷ್ಯ ತೋರದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ದಣಿವು :
ಹೃದಯದ ಅಪಧಮನಿಗಳು ಮುಚ್ಚಿಹೋದಾಗ, ಯಾವುದೇ ಕಾರಣವಿಲ್ಲದೆ ದಣಿವಾಗುತ್ತದೆ.ತೀವ್ರ ತಲೆತಿರುಗುವಿಕೆ ಅಥವಾ ದೌರ್ಬಲ್ಯದ ಅನುಭವವಾಗುತ್ತದೆ. ವಾಂತಿ ಮತ್ತು ವಾಕರಿಕೆ ಮುಂತಾದ ದೂರುಗಳು ಕೇಳಿ ಬರುತ್ತವೆ.
ಹಲ್ಲು ಮತ್ತು ದವಡೆಗಳಲ್ಲಿ ನೋವು :
ಹೃದಯಾಘಾತದ ಸಂದರ್ಭದಲ್ಲಿ, ರೋಗಿಗಳ ಎದೆಯಲ್ಲಿ ನೋವು ಕಾಣಿಸುವುದು ಸಾಮಾನ್ಯ. ಆದರೆ ಕ್ರಮೇಣ ಈ ನೋವು ದವಡೆಗಳವರೆಗೆ ತಲುಪುತ್ತದೆ. ಹೀಗಾಗುತ್ತಿದ್ದರೆ ತಡ ಮಾಡದೆ ವೈದ್ಯರನ್ನು ಸಂಪರ್ಕಿಸಿ.
(ಸೂಚನೆ :ಈ ಲೇಖನವು ಸಾಮಾನ್ಯ ಮಾಹಿತಿಗಾಗಿ, ದಯವಿಟ್ಟು ಯಾವುದೇ ಪರಿಹಾರವನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿರಿ.