HEALTH TIPS

ಬಂದೇ ಬಿಡ್ತು ಅದ್ಭುತ AI ವಿಡಿಯೋ ಟೂಲ್; Meta ಮತ್ತು OpenAIಗೆ ಸವಾಲ್!

 ಡೋಬ್ (Adobe) ತನ್ನದೇ ಆದ ವಿಶೇಷತೆಗಳ ಮೂಲಕ ಪ್ರಖ್ಯಾತಿ ಪಡೆದಿದೆ. ಆಗಾಗ್ಗೆ ಹೊಸ ವೈಶಿಷ್ಟ್ಯ ಮತ್ತು ನವೀಕರಣಗಳನ್ನು ಪರಿಚಯಿಸುತ್ತಿದೆ. ಅದರಂತೆ ಇದೀಗ, ಎಐ ವಿಡಿಯೋ ಜನರೇಟರ್ (Firefly AI video generator) ಅನ್ನು ಪರಿಚಯಿದೆ. ಈ ಮೂಲಕ ಓಪನ್‌ ಎಐ (OpenAI) ಮತ್ತು ಮೆಟಾಗೆ (Meta) ಸವಾಲು ಹಾಕಿದೆ.

ಅಡೋಬ್‌ನ ಈ ಎಐ ವಿಡಿಯೋ ಜನರೇಟರ್ ಮೂರು ಹೊಸ ಟೂಲ್‌ಗಳನ್ನು ಒಳಗೊಂಡಿದೆ. ಅವುಗಳೇ, ಪಠ್ಯದಿಂದ ವಿಡಿಯೋ, ಫೋಟೋದಿಂದ ವಿಡಿಯೋ ಮತ್ತು ಜನರೇಟಿವ್ ಎಕ್ಸ್ಟೆಂಡ್ (ಉತ್ಪಾದಕತೆಯ ವಿಸ್ತರಣೆ) ಆಗಿದೆ. ಇವುಗಳಿಂದ ಏನೆಲ್ಲಾ ಪ್ರಯೋಜನವಿದೆ ತಿಳಿಯೋಣ ಬನ್ನಿ.

ಹೌದು, ಅಡೋಬ್ ಹೊಸ ಎಐ ಟೂಲ್‌ ಅನ್ನು ತಂದಿದೆ. ಇದನ್ನು ಪಠ್ಯ ಪ್ರಾಂಪ್ಟ್‌ಗಳಿಂದ ವಿಡಿಯೋಗಳನ್ನು ರಚಿಸಲು ಬಳಸಲಾಗುತ್ತದೆ. ಮತ್ತು ಈ ಹೊಸ ಎಐ ವಿಡಿಯೋ ಟೂಲ್ (ಉಪಕರಣ) ಉತ್ಪಾದಕ ಕೃತಕ ಬುದ್ಧಿಮತ್ತೆ ಸಾಧನಗಳನ್ನು ಬಳಸಿಕೊಂಡು ಸಿನಿಮಾ (ಚಲನಚಿತ್ರ) ಮತ್ತು ಟೆಲಿವಿಷನ್ ಉತ್ಪಾದನೆಯನ್ನು ಪರಿವರ್ತಿಸಲು ಪ್ರಯತ್ನಿಸುತ್ತಿರುವ ಕಂಪನಿಗಳಿಗೆ ಹೆಚ್ಚು ಸಹಕಾರಿಯಾಗಲಿದೆ. ಫೈರ್‌ಫ್ಲೈ ವಿಡಿಯೋ ಮಾಡೆಲ್, ಪ್ರಸ್ತುತ ಸೀಮಿತ ಸಾರ್ವಜನಿಕ ಬೀಟಾದಲ್ಲಿದೆ. ವಾಣಿಜ್ಯಿಕವಾಗಿ ಸುರಕ್ಷಿತವಾಗಿರಲು ವಿನ್ಯಾಸಗೊಳಿಸಲಾದ ಮೊದಲ ಸಾರ್ವಜನಿಕವಾಗಿ ಲಭ್ಯವಿರುವ ವಿಡಿಯೋ ಟೂಲ್‌ ಆಗಿದೆ ಎಂದು ಕಂಪನಿ ಹೇಳಿದೆ.

ಅಡೋಬ್ ಯೂನಿವರ್ಸ್ ಈಗಾಗಲೇ ಇಮೇಜ್ ಮಾಡೆಲ್, ವೆಕ್ಟರ್ ಮಾಡೆಲ್ ಮತ್ತು ಡಿಸೈನ್ ಮಾಡೆಲ್ ಸೇರಿದಂತೆ ಹಲವು ಎಐ ಉತ್ಪಾದಕ ಟೂಲ್‌ಗಳನ್ನು ಒಳಗೊಂಡಿದೆ. ಇದೀಗ, ಫೈರ್‌ಫ್ಲೈ ವಿಡಿಯೋ ಟೂಲ್‌ ಕಂಪನಿಗೆ ಹೆಚ್ಚುವರಿ ಮೈಲೇಜ್ ನೀಡುತ್ತದೆ. ಬಿಡುಗಡೆಯಾದ ಒಂದು ವರ್ಷದೊಳಗೆ, ಫೈರ್‌ಫ್ಲೈ ಅನ್ನು ಫೋಟೋಶಾಪ್, ಎಕ್ಸ್‌ಪ್ರೆಸ್, ಇಲ್ಲಸ್ಟ್ರೇಟರ್, ಸಬ್‌ಸ್ಟಾನ್ಸ್ 3D ಮತ್ತು ಹೆಚ್ಚಿನವುಗಳಿಗೆ ವಿಸ್ತರಿಸಲಾಯಿತು. ಇದು, ಕ್ರಿಯೇಟಿವ್ ಕ್ಲೌಡ್ ಅಪ್ಲಿಕೇಶನ್‌ಗಳಲ್ಲಿ ವಿವಿಧ ವರ್ಕ್‌ಫ್ಲೋಗಳನ್ನು ಬೆಂಬಲಿಸುತ್ತದೆ. ಫೈರ್‌ಫ್ಲೈ 100 ಕ್ಕೂ ಹೆಚ್ಚು ಭಾಷೆಗಳಲ್ಲಿ ಪಠ್ಯ ಪ್ರಾಂಪ್ಟ್‌ಗಳನ್ನು ಸಹ ಬೆಂಬಲಿಸುತ್ತದೆ.

ಫೈರ್‌ಫ್ಲೈ ಎಐ ವಿಡಿಯೋ ಜನರೇಟರ್‌ ಈ ವರ್ಷದ ಆರಂಭದಲ್ಲಿ ಪರಿಚಯಿಸಲಾದ ಓಪನ್‌ ಎಐನ (OpenAI) ಸೋರಾಗೆ ಪೈಪೋಟಿ ನೀಡುತ್ತದೆ. ತಮ್ಮ ವಿಡಿಯೋ ಟೂಲ್‌ಗಳನ್ನು ಘೋಷಿಸಿದ ಕಂಪನಿಗಳಾದ ಟಿಕ್‌ಟಾಕ್ ಮತ್ತು ಮೆಟಾಗೂ ಸಹ ಸ್ಪರ್ಧೆ ನೀಡಲಿದೆ. ಇವು, ಅಡೋಬ್‌ನ ಎಐ ವಿಡಿಯೋ ಟೂಲ್‌ನಿಂದ ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ಆದಾಗ್ಯೂ, ಈ ಟೂಲ್ ಬಿಡುಗಡೆ ದಿನಾಂಕವನ್ನು ಕಂಪನಿಯು ಬಹಿರಂಗಪಡಿಸಿಲ್ಲ. ಆದರೆ, ಇದು ಶೀಘ್ರದಲ್ಲೇ ಬರುವ ನಿರೀಕ್ಷೆಯಿದೆ.

ವ್ಯಾಪಾರ ಬಳಕೆಗೆ ಈ ಟೂಲ್ ಹೆಚ್ಚು ಪ್ರಯೋಜನಕಾರಿ

ಸ್ಯಾನ್ ಜೋಸ್, ಕ್ಯಾಲಿಫೋರ್ನಿಯಾ ಮೂಲದ ಸಾಫ್ಟ್‌ವೇರ್ ದೈತ್ಯ ತನ್ನ ಕಾಯುವ ಪಟ್ಟಿಯಲ್ಲಿರುವ ವ್ಯಕ್ತಿಗಳಿಗಾಗಿ ಫೈರ್‌ಫ್ಲೈ ವಿಡಿಯೋ ಟೂಲ್ ಅನ್ನು ಪರಿಚಯಿಸುತ್ತಿದೆ. ಇದೇ ಸಮಯದಲ್ಲಿ, ಅಡೋಬ್‌ನ ತಂತ್ರವು ಉಳಿದ ಸ್ಪರ್ಧಿಗಳಿಗಿಂತ ಭಿನ್ನವಾಗಿದೆ. ಏಕೆಂದರೆ, ಇದು ಕಾನೂನುಬದ್ಧವಾಗಿ ಸ್ವಚ್ಛಗೊಳಿಸಿದ ಡೇಟಾದಲ್ಲಿ ತರಬೇತಿ ಮಾದರಿಗಳ ಮೇಲೆ ಕೇಂದ್ರೀಕರಿಸುತ್ತದೆ. ಇದರಿಂದಾಗಿ ಈ ಟೂಲ್ (ಉಪಕರಣ) ವಾಣಿಜ್ಯ ಬಳಕೆಗೆ ಪ್ರಯೋಜನಕಾರಿಯಾಗಬಹುದು.

ಪ್ರಸ್ತುತ, ಅಡೋಬ್ ತನ್ನ ವಿಡಿಯೋ ಟೂಲ್‌ಗಳನ್ನು ಬಳಸಿಕೊಂಡು ಯಾವುದೇ ಕ್ಲೈಂಟ್‌ಗಳನ್ನು ಬಹಿರಂಗಪಡಿಸಿಲ್ಲ. ಆದರೆ, ಪೆಪ್ಸಿಕೋ ಬ್ರಾಂಡ್ ಗ್ಯಾಟೋರೇಡ್ ಗ್ರಾಹಕ ಆರ್ಡರ್‌ಗಾಗಿ ಲಭ್ಯವಿರುವ ಕಸ್ಟಮ್ ವಿನ್ಯಾಸದ ಬಾಟಲಿಗಳನ್ನು ರಚಿಸಲು, ಅಡೋಬ್‌ನ ಇಮೇಜ್ ಜನರೇಷನ್ ಮಾದರಿಯನ್ನು ಬಳಸಲು ಯೋಜಿಸಿದೆ ಎಂದು ಕಂಪನಿ ಹೇಳಿದೆ. ಹೆಚ್ಚುವರಿಯಾಗಿ, ಮ್ಯಾಟೆಲ್ ತನ್ನ ಬಾರ್ಬಿ ಗೊಂಬೆಗಳ ಪ್ಯಾಕೇಜಿಂಗ್‌ಗಾಗಿ ವಿನ್ಯಾಸ ಪ್ರಕ್ರಿಯೆಯಲ್ಲಿ ಅಡೋಬ್ ಟೂಲ್‌ಗಳನ್ನು ಸಂಯೋಜಿಸಿದೆ.

ವಿಡಿಯೋ ತಯಾರಕರು, ಸಂಪಾದಕರಿಗಾಗಿ ವಿನ್ಯಾಸ

ಅಡೋಬ್‌ನ ಡಿಜಿಟಲ್ ಮೀಡಿಯಾದ ಮುಖ್ಯ ತಂತ್ರಜ್ಞಾನ ಅಧಿಕಾರಿ ಎಲಿ ಗ್ರೀನ್‌ಫೀಲ್ಡ್ ಅವರು, ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕಂಪನಿಯ ವಿಡಿಯೋ ಟೂಲ್‌ಗಳನ್ನು ವಿಡಿಯೋ ತಯಾರಕರು ಮತ್ತು ಸಂಪಾದಕರು ಪ್ರತಿದಿನ ಮಾಡುವ ಕಾರ್ಯಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಅವರ ಕೆಲಸವನ್ನು ಸರಳಗೊಳಿಸಲು ಮತ್ತು ತುಣುಕಿನ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಫೈರ್‌ಫ್ಲೈ ವಿಡಿಯೋ ಟೂಲ್ ಸಾಂಪ್ರದಾಯಿಕ ತುಣುಕನ್ನು ಹೊಂದಿದೆ. ನಾವು ನಿಜವಾಗಿಯೂ ಸಣ್ಣ ನಿಯಂತ್ರಣಗಳ ಮೇಲೆ ಕೇಂದ್ರೀಕರಿಸುತ್ತೇವೆ. ಜೊತೆಗೆ, ವಿಡಿಯೋ ಸಂಪಾದಕರು ಮತ್ತು ವಿಡಿಯೋಗ್ರಾಫರ್‌ಗಳು ಬಳಸುವ ಎಲ್ಲಾ ವಿಷಯಗಳನ್ನು ಟೂಲ್‌ಗೆ (ಮಾದರಿ) ಕಲಿಸುತ್ತೇವೆ ಎಂದು ಗ್ರೀನ್‌ಫೀಲ್ಡ್ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries