ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ನಿಗಿದಪಡಿಸಲಾಗಿದ್ದ 'ಪ್ರೈಮ್-ಟೈಮ್' ಸಂದರ್ಶನವನ್ನು ಬಿಬಿಸಿ ಸುದ್ದಿ ಸಂಸ್ಥೆಯು ಕೊನೆಯ ಕ್ಷಣದಲ್ಲಿ ರದ್ದುಪಡಿಸಿದೆ.
ಜಾನ್ಸನ್ ಅವರೊಂದಿಗೆ ಇಂದು (ಗುರುವಾರ) ಸಂಜೆ ಸಂದರ್ಶನ ನಿಗದಿಯಾಗಿತ್ತು.
ಸಂದರ್ಶನಕ್ಕೆ ಸಿದ್ದಪಡಿಸಿಕೊಂಡಿದ್ದ ಪ್ರಶ್ನೆಗಳನ್ನು ಲೌರಾ ಅವರು ತಮ್ಮ ತಂಡಕ್ಕೆ ಕಳುಹಿಸ ಬಯಸಿದ್ದರು. 'ಇದು ತೀರಾ ನಿರಾಶಾದಾಯಕ ಬೆಳವಣಿಗೆ. ಇದನ್ನು ಅವಮಾನ ಹಾಗೂ ನಿರಾಸೆ ಎಂದಷ್ಟೇ ಹೇಳಬಹುದೇ ಹೊರತು, ಬೇರೇನೂ ಹೇಳಿ ನಟಿಸಲು ಸಾಧ್ಯವಿಲ್ಲ. ಸಂದರ್ಶನದಲ್ಲಿ ಬಹಳಷ್ಟು ಪ್ರಮುಖ ಪ್ರಶ್ನೆಗಳನ್ನು ಕೇಳುವುದಿತ್ತು' ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ರಾಜಕೀಯ ವ್ಯಕ್ತಿಗಳ ಸಂದರ್ಶನದಲ್ಲಿ ಒಂದು ಪಕ್ಷಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂಬ ಆರೋಪವನ್ನು ರಾಜಕೀಯ ವರದಿಗಾರರು ಯಾವುದೇ ಹಿಂಜರಿಕೆ ಇಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಿಸುತ್ತಿರುತ್ತಾರೆ. ಹೀಗಾಗಿ ಸಾರ್ವಜನಿಕ ಸ್ವಾಮ್ಯ ಸಂಸ್ಥೆಯಾಗಿರುವ ಬಿಬಿಸಿಯು ಸಂದರ್ಶನಕ್ಕೆ ಆಯ್ಕೆ ಮಾಡಿಕೊಳ್ಳುವವರನ್ನು ಅತ್ಯಂತ ಜಾಗರೂಕತೆಯಿಂದ ಪರಿಶೀಲಿಸಿ ಮಾಡುತ್ತದೆ ಎಂದೆನ್ನಲಾಗಿದೆ.
'ಬೋರಿಸ್ ಜಾನ್ಸನ್ ಅವರ ಅತ್ಯಂತ ಪ್ರಮುಖವಾದ ಮೊದಲ ಸಂದರ್ಶನ ಎಂಬ ಶೀರ್ಷಿಕೆಯಡಿ ಜಾಹೀರಾತು ಪ್ರಸಾರ ಮಾಡಲಾಗಿತ್ತು. ಗುರುವಾರ ಸಂಜೆಗೆ ವೇದಿಕೆಯೂ ಸಿದ್ಧಗೊಂಡಿತ್ತು. ಕೋವಿಡ್ ಸಂದರ್ಭವನ್ನು ಸರ್ಕಾರ ಎದುರಿಸಿದ ರೀತಿ ಕುರಿತು ಜಾನ್ಸನ್ ಮಾತನಾಡುವವರಿದ್ದರು. ವಿರೋಧ ಪಕ್ಷಗಳ ಟೀಕೆಗೆ ಜಾನ್ಸನ್ ಅವರು ಪ್ರಧಾನಿ ಹುದ್ದೆ ತೊರೆಯುವಂತಾಯಿತು ಎಂದೇ ರಾಜಕೀಯ ಪಂಡಿತರು ಹೇಳುತ್ತಾರೆ.
ಬೋರಿಸ್ ಜಾನ್ಸನ್ ಅವರು 2019ರಿಂದ 2022ರವರೆಗೆ ಪ್ರಧಾನಿಯಾಗಿದ್ದರು. ಅವರ ಆತ್ಮಕಥೆಯು ಅ. 10ರಂದು ಬಿಡುಗಡೆಯಾಗುತ್ತಿದೆ. ಈ ಸಂದರ್ಶನ ಕುರಿತ ಬೆಳವಣಿಗೆಯು ಅಸಮರ್ಥನೀಯ ಎಂಬುದರಲ್ಲಿ ಎರಡು ಮಾತಿಲ್ಲ. ಸಂದರ್ಶನ ರದ್ದುಪಡಿಸುವ ಕುರಿತು ಬೋರಿಸ್ ಜಾನ್ಸನ್ ತಂಡ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ.