ಮುಳ್ಳೇರಿಯ: ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ನವೀಕರಣ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ 2025 ಫೆಬ್ರವರಿ 2ರಿಂದ 10ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದು. ಕಾರ್ಯಕ್ರಮದ ಯಶಸ್ವಿಗಾಗಿ ಗೋಸಾಡ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಪ್ರಾದೇಶಿಕ ಸಮಿತಿಯನ್ನು ರಚಿಸಲಾಯಿತು.
ಪ್ರಾದೇಶಿಕ ಸಮಿತಿ ಗೌರವಾಧ್ಯಕ್ಷರಾಗಿ ಶ್ರೀನಿವಾಸ ಅಮ್ಮಣ್ಣಾಯ, ಪರಮೇಶ್ವರ್ ಭಟ್, ರಾಘವ ಮಣಿಯಾಣಿ ಬೆಳ್ಳಿಗೆ, ಅಧ್ಯಕ್ಷರಾಗಿ ಪ್ರಸಾದ್ ಮಣಿಯಾಣಿ, ಉಪಾಧ್ಯಕ್ಷರಾಗಿ ದಾಮೋದರ ಮಣಿಯಾಣಿ, ರಾಧಾಕೃಷ್ಣ ನಾಯರ್, ಕಾರ್ಯದರ್ಶಿಯಾಗಿ ರವೀಂದ್ರ ರೈ ಗೋಸಾಡ, ಜತೆ ಕಾರ್ಯದರ್ಶಿಯಾಗಿ ನಾರಾಯಣ ಮಲ್ಲಮೂಲೆ, ಸಂತೋಷ್, ನಿತಿನ್, ಭರತ್ ಮಣಿಯಾಣ, Â ಕೋಶಾಧಿಕಾರಿಯಾಗಿ ಸುಧಾಕರ ಮಣಿಯಾಣಿ ಅವರನ್ನು ಆಯ್ಕೆ ಮಾಡಲಾಯಿತು.