ನವದೆಹಲಿ (PTI): ಕ್ಯಾನ್ಸರ್ ಗುಣಪಡಿಸಲು ನೀಡಲಾಗುತ್ತಿರುವ ಮೂರು ಜೀವ ರಕ್ಷಕ ಔಷಧಗಳ ಬೆಲೆ ಇಳಿಸುವಂತೆ ಔಷಧ ತಯಾರಿಕಾ ಕಂಪನಿಗಳಿಗೆ ಕೇಂದ್ರ ಸರ್ಕಾರ ಮಂಗಳವಾರ ಸೂಚಿಸಿದೆ.
ನವದೆಹಲಿ (PTI): ಕ್ಯಾನ್ಸರ್ ಗುಣಪಡಿಸಲು ನೀಡಲಾಗುತ್ತಿರುವ ಮೂರು ಜೀವ ರಕ್ಷಕ ಔಷಧಗಳ ಬೆಲೆ ಇಳಿಸುವಂತೆ ಔಷಧ ತಯಾರಿಕಾ ಕಂಪನಿಗಳಿಗೆ ಕೇಂದ್ರ ಸರ್ಕಾರ ಮಂಗಳವಾರ ಸೂಚಿಸಿದೆ.
2024-25ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಟ್ರಾಸ್ಟುಜುಮಾಬ್, ಒಸಿಮೆರ್ಟಿನಿಬ್ ಮತ್ತು ದುರ್ವಾಲುಮಾಬ್ ಔಷಧಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 10ರಿಂದ ಶೂನ್ಯಕ್ಕೆ ಕಡಿತಗೊಳಿಸಲಾಗಿದೆ.
ರೋಗಿಗಳಿಗೆ ಕೈಗೆಟುಕುವ ಬೆಲೆಗೆ ಈ ಔಷಧಗಳು ದೊರೆಯುವಂತೆ ಮಾಡಲು ಸರ್ಕಾರ ನಿರ್ಧರಿಸಿದೆ. ಗರಿಷ್ಠ ಮಾರಾಟ ದರವನ್ನು (ಎಂಆರ್‌ಪಿ) ಕಡಿತಗೊಳಿಸಿ ಪರಿಷ್ಕರಣೆ ಮಾಡಿರುವ ದರವನ್ನು ಔಷಧಗಳ ಮೇಲೆ ನಮೂದಿಸಬೇಕು ಎಂದು ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರವು
ಸೂಚಿಸಿದೆ.
ಈಗಾಗಲೇ, ಈ ಔಷಧಗಳಿಗೆ ಕಸ್ಟಮ್ಸ್ ಸುಂಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಸುಂಕ ಹಾಗೂ ಜಿಎಸ್‌ಟಿ ಕಡಿತ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬೇಕು ಎಂದು ನಿರ್ದೇಶನ ನೀಡಿದೆ.