ಕಾಸರಗೋಡು: ಮಾದಕದ್ರವ್ಯ ಹ್ಯಾಶಿಶ್ ಆಯಿಲ್ ಸಾಗಾಟ ಪ್ರಕರಣದ ಆರೋಪಿ, ಹೊಸದುರ್ಗ ಪಡನ್ನಕ್ಕಾಡ್ ನಿವಾಸಿ ರಿಯಾಸ್ ಎ.ಸಿ ಎಂಬಾತನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಕೆ. ಪ್ರಿಯಾ ಹತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ತಿಳಿಸಿದೆ. 2022 ಸಎ. 29ರಂದು ಬೇಕಲಕೋಟೆ ಸನಿಹ ಹ್ಯಾಶಿಶ್ ಅಯಿಲ್ ಸಾಗಿಸುತ್ತಿದ್ದಾಗ ಹೊಸದುರ್ಗ ಠಾಣೆ ಅಂದಿನ ಎಸ್.ಐ ಸಲಾಂ ಕೆ. ನೇತೃತ್ವದ ಪೊಲೀಸರ ತಂಡ ಈತನನ್ನು ಬಂಧಿಸಿತ್ತು.