HEALTH TIPS

ಪ್ರತಿ ಹನಿ ರಕ್ತಕ್ಕೂ ಪ್ರತ್ಯುತ್ತರ: ಜಮ್ಮು & ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌

       ಶ್ರೀನಗರ: ಕೇಂದ್ರಾಡಳಿತ ಪ್ರದೇಶದ ನೆಲದ ಮೇಲೆ ಬಿದ್ದ ಮುಗ್ಧರ ಪ್ರತಿ ಹನಿ ರಕ್ತಕ್ಕೂ ಪ್ರತ್ಯುತ್ತರ ನೀಡುತ್ತೇವೆ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಮಿಶ್ರಾ ಅವರು ಆಕ್ರೋಶ ವ್ಯಕ್ತಪಡಿಸಿದರು.

        ಶ್ರೀನಗರದ ಹೊರವಲಯದಲ್ಲಿ ನಡೆದ, ಗಡಿ ಭದ್ರತಾ ಪಡೆಗೆ ನೇಮಕವಾದ 629 ಸೈನಿಕರ ನಿರ್ಗಮನ ಪಥಸಂಚಲನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, 'ಭಯೋತ್ಪಾದನೆಯ ಬೆದರಿಕೆಯನ್ನು ಮಟ್ಟಹಾಕಲು ನೂತನ ಕಾರ್ಯತಂತ್ರವನ್ನು ಹೆಣೆಯಲಾಗಿದೆ.

ನೆಲದ ಮೇಲೆ ಬಿದ್ದ ಪ್ರತಿ ಹನಿ ರಕ್ತಕ್ಕೂ ಭದ್ರತಾ ಪಡೆಗಳು ತಕ್ಕ ಪ್ರತ್ಯುತ್ತರ ನೀಡಲಿವೆ' ಎಂದು ಎಚ್ಚರಿಕೆ ನೀಡಿದರು.

             ಪಾಕಿಸ್ತಾನವನ್ನು ಪರೋಕ್ಷವಾಗಿ ಉಲ್ಲೇಖಿಸಿ, 'ಭಾರತವು ನೆರೆಯ ರಾಷ್ಟ್ರಗಳಿಂದ ಶಾಂತಿ ಬಯಸುತ್ತದೆ. ಆದರೆ, ದುದೃಷ್ಟವಶಾತ್‌ ಬಡತನ ತಾಂಡವವಾಡುತ್ತಿದ್ದರೂ ಯಾವಾಗಲೂ ಶಾಂತಿ ಕದಡಲು ಯತ್ನಿಸುವ ದೇಶವನ್ನು ಪಕ್ಕದಲ್ಲಿ ಹೊಂದಿದ್ದೇವೆ' ಎಂದು ಹೇಳಿದರು.

ಡ್ರೋನ್‌ಗಳ ಮೂಲಕ ಮಾದಕ ವಸ್ತುಗಳು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಯಂತಹ ಪ್ರಮುಖ ಸವಾಲುಗಳ ವಿರುದ್ಧ ಹೋರಾಡಲು ಸೇನೆಯು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಿದೆ. ನಮ್ಮ ಯುವ ಜನರನ್ನು ಡ್ರಗ್ಸ್ ವ್ಯಸನಿಗಳನ್ನಾಗಿ ಮಾಡಲಾಗುತ್ತಿದೆ. ಅದರಲ್ಲಿ ಸಂಗ್ರಹವಾದ ಹಣವನ್ನು ಭಯೋತ್ಪಾದನೆಗೆ ಮೀಸಲಿಡಲಾಗುತ್ತಿದೆ ಎಂದು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries