ತಿರುವನಂತಪುರಂ: ನೋಕ್ಕುಕೂಲಿ(ನೋಡಿದ್ದಕ್ಕೆ ಪಡೆಯುವ ಕೂಲಿ-ಕೇರಳದ ಮಾತ್ರ ಒಂದು ಪದ್ದತಿ)ಪಡೆದ ಸಾರಿಗೆ ನೌಕರರನ್ನು ಅಮಾನತುಗೊಳಿಸಲಾಗಿದೆ. ಕಂಟೋನ್ಮೆಂಟ್ ಪ್ರದೇಶದಲ್ಲಿ ಒಕ್ಕೂಟದ 12 ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಸೆಕ್ರೆಟರಿಯೇಟ್ ಹಿಂಭಾಗದ ಸೆಂಟ್ರಲ್ ಸ್ಟೇಡಿಯಂನಲ್ಲಿ ಈ ಘಟನೆ ನಡೆದಿದೆ. ಲಾರಿಯಲ್ಲಿ ಆಗಮಿಸಿದ್ದ ಸಾಮಾನು-ಸರಂಜಾಮುಗಳನ್ನು ಇಳಿಸದೆ ಗುತ್ತಿಗೆದಾರರಿಂದ 15,000 ರೂ.ಸುಮ್ಮನೆ ಪಡೆಯಲಾಗಿದೆ.
ನೋಕ್ಕುಕೂಲಿ ಪಡೆದಿರುವ ಕುರಿತು ಗುತ್ತಿಗೆದಾರರು ಸಚಿವ ವಿ.ಶಿವನ್ ಕುಟ್ಟಿ ಅವರಿಗೆ ನೀಡಿರುವ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ದೂರಿನ ಮೇರೆಗೆ ಕಾರ್ಮಿಕ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಣ ಪಡೆದಿರುವುದು ಖಚಿತಪಡಿಸಿ ಸಚಿವರು ಕ್ರಮಕ್ಕೆ ಸೂಚನೆ ನೀಡಿದರು.