ಕಾಸರಗೋಡು : ನವರಾತ್ರಿ ಆಚರಣೆಯ ಅಂಗವಾಗಿ ಆಯುಧಪೂಜೆ, ವಿದ್ಯಾದಶಮಿ ಅಂಗವಾಗಿ ವಿದ್ಯಾರಂಭ ಜಿಲ್ಲೆಯ ನಾನಾ ಶಕ್ತಿ ದೇವಾಲಯಗಳಲ್ಲಿ ಶನಿವಾರ ನೆರವೇರಿತು. ಭಾನುವಾರ ಮಹಾನವಮಿ ಆಚರಿಸಲಾಗುವುದು.
ಶುಕ್ರವಾರ ಹಾಗೂ ಶನಿವಾರ ದಿವಸಗಳಂದು ವಾಹನ ಪೂಜೆ ನೆರವೇರಿತು. ಕೊರಕ್ಕೋಡು ಶ್ರೀ ದುರ್ಗಾಪರಮೇಶ್ವರೀ ಮಹಾಕಾಳಿ ಕಾಶೀ ಕಾಳಭೈರವೇಶ್ವರ ದೇವಸ್ಥಾನದಲ್ಲಿ ವಿದ್ಯಾದಶಮಿ ಅಂಗವಾಗಿ ವಿಶೇಷ ಪೂಜೆ, ಗಣಪತಿ ಹೋಮ, ಅಕ್ಷರಾಬ್ಯಾಸ, ಪಲ್ಲಕ್ಕಿ ಪೂಜೆ ನಡೆಯಿತು. ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದಲ್ಲಿ ಶ್ರೀ ಶಾರದಾಪೂಜೆ, ಅಕ್ಷರಾಭ್ಯಾಸ, ಯಕ್ಷಗಾನ ಪೂರ್ವರಂಗ, ಯಕ್ಷಗಾನ ಬಯಲಾಟ ನಡೆಯಿತು. ನವರಾತ್ರಿ ಮಹೋತ್ಸವ ಅಂಗವಾಗಿ ಜಿಲ್ಲೆಯಾದ್ಯಂತ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆಯೂ ಹೆಚ್ಚಾಗಿತ್ತು. ಭಾನುವಾರದಂದು ವಿಜಯದಶಮಿ ಆಚರಿಸಲಾಗುವುದು. ವಿಜಯದಶಮಿಯಂದು ಮಕ್ಕಳು ತಮ್ಮ ಮೊದಲಕ್ಷರಗಳನ್ನು ಬರೆಯಲು ದೇವಾಲಯಗಳು ಮತ್ತು ವಿವಿಧ ಸಂಸ್ಥೆಗಳಿಗೆ ಭೇಟಿ ನೀಡಲಿದ್ದಾರೆ.