ಟೆಲ್ ಅವೀವ್: ಇಸ್ರೇಲ್‌ನ ಹೆಚ್ಚು ಜನವಸತಿ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ಮಂಗಳವಾರ ಹಿಜ್ಬುಲ್ಲಾಗಳು ಸರಣಿ ರಾಕೆಟ್ ದಾಳಿ ನಡೆಸಿದರು. ಇದಾದ ಕೆಲವೇ ಕ್ಷಣಗಳಲ್ಲಿ ನಗರದಲ್ಲಿ ತಕ್ಷಣವೇ ಸೈರನ್‌ಗಳು ಮೊಳಗಿದವು. ಆದರೆ, ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಟೆಲ್ ಅವೀವ್: ಇಸ್ರೇಲ್‌ನ ಹೆಚ್ಚು ಜನವಸತಿ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ಮಂಗಳವಾರ ಹಿಜ್ಬುಲ್ಲಾಗಳು ಸರಣಿ ರಾಕೆಟ್ ದಾಳಿ ನಡೆಸಿದರು. ಇದಾದ ಕೆಲವೇ ಕ್ಷಣಗಳಲ್ಲಿ ನಗರದಲ್ಲಿ ತಕ್ಷಣವೇ ಸೈರನ್‌ಗಳು ಮೊಳಗಿದವು. ಆದರೆ, ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಲೆಬನಾನ್ ಭಾಗದಿಂದ ಐದು ರಾಕೆಟ್‌ಗಳ ದಾಳಿ ನಡೆದಿದೆ. 'ಕ್ಷಿಪಣಿ ತಡೆ ವ್ಯವಸ್ಥೆ'ಯು ಬಹುಪಾಲು ರಾಕೆಟ್‌ಗಳನ್ನು ಆಕಾಶಮಾರ್ಗದಲ್ಲಿಯೇ ಹೊಡೆದುರುಳಿಸಿತು. ಒಂದು ರಾಕೆಟ್ ಖಾಲಿ ಪ್ರದೇಶದಲ್ಲಿ ಬಂದು ಬಿದ್ದಿತು ಎಂದು ಎಂದು ಇಸ್ರೇಲ್ ಸೇನೆ ತಿಳಿಸಿದೆ.
ಹಿಜ್ಬುಲ್ಲಾ ಸಂಘಟನೆಗಳಿಗೆ ಆರ್ಥಿಕ ನೆರವು ಒದಗಿಸುತ್ತಿದ್ದ ಆರೋಪದ ಮೇಲೆ 'ಅಲ್-ಖರ್ದ್-ಅಲ್ ಹಸನ್'ನ ಬ್ಯಾಂಕ್ ಶಾಖೆಗಳ ಮೇಲೆ ಇಸ್ರೇಲ್ ಭಾನುವಾರ ರಾತ್ರಿ ವಾಯುದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಹಿಜ್ಬುಲ್ಲಾ ಸಂಘಟನೆಗಳು ಈ ದಾಳಿ ನಡೆಸಿವೆ ಎಂದು ವಿಶ್ಲೇಷಿಸಲಾಗಿದೆ. ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಹತ್ಯೆ ಬೆನ್ನಲ್ಲೇ, ಗಾಜಾದಲ್ಲಿ ಕದನ ವಿರಾಮ ಮರು ಸ್ಥಾಪಿಸುವ ಉದ್ದೇಶದಿಂದ ಅಮೆರಿಕವು ಮಾತುಕತೆಗೆ ಮತ್ತೆ ಚಾಲನೆ ನೀಡಿದೆ.
ಸಾವಿನ ಸಂಖ್ಯೆ 13ಕ್ಕೆ ಏರಿಕೆ
ಲೆಬನಾನ್‌ನ ರಾಜಧಾನಿ ಬೈರೂತ್‌ನ ಪ್ರಮುಖ ಆಸ್ಪತ್ರೆ ಸನಿಹ ಇಸ್ರೇಲ್ ನಡೆಸಿದ ವಾಯುದಾಳಿಯಿಂದ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಡಜನ್‌ಗೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸೋಮವಾರ ತಡರಾತ್ರಿ ವೇಳೆ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿದ್ದ ಕಟ್ಟಡವನ್ನು ಗುರಿಯಾಗಿರಿಸಿಕೊಂಡು ಇಸ್ರೇಲ್ ವಾಯು ದಾಳಿ ನಡೆಸಿತ್ತು. ಇದರಿಂದ 57 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ತಿಳಿಸಿತ್ತು. ಆಸ್ಪತ್ರೆಯ ಮುಖ್ಯದ್ವಾರದ ಸನಿಹದಲ್ಲೇ ಈ ದಾಳಿ ನಡೆದಿರುವ ದೃಶ್ಯವೂ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡಿದೆ. 'ನಾವು ಭಯೋತ್ಪಾದಕರನ್ನು ಗುರಿಯಾಗಿರಿಸಿಕೊಂಡು ಮಾತ್ರ ದಾಳಿ ನಡೆಸಿದ್ದು ನಾಗರಿಕರಿಗೆ ಹಾನಿಯಾಗುವುದನ್ನು ತಪ್ಪಿಸಲು ಯತ್ನಿಸುತ್ತಿದ್ದೇವೆ' ಎಂದು ಇಸ್ರೇಲ್ ಸೇನೆಯು ತಿಳಿಸಿದೆ.