ವಯನಾಡ್: ವಯನಾಡ್ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸಿದ್ದಾರೆ.
ಪ್ರಿಯಾಂಕಾ ಅವರೊಂದಿಗೆ ತಾಯಿ ಸೋನಿಯಾ ಗಾಂಧಿ, ಸಹೋದರ ರಾಹುಲ್ ಗಾಂಧಿ, ಪತಿ ರಾಬರ್ಟ್ ವಾದ್ರಾ, ಪುತ್ರ ರೇಹಾನ್ ವಾದ್ರಾ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಇದ್ದರು.
ಸೋನಿಯಾ ಗಾಂಧಿ ಮತ್ತು ರೋಬೋಟ್ ವಾದ್ರಾ ಅವರೊಂದಿಗೆ ಪ್ರಿಯಾಂಕಾ ಗಾಂಧಿ ಅವರು ನಾಮಪತ್ರ ಸಲ್ಲಿಸಲು ನಿನ್ನೆ ರಾತ್ರಿ 8.30 ಕ್ಕೆ ಬತ್ತೇರಿಯ ರೆಸಾರ್ಟ್‍ಗೆ ತಲುಪಿದ್ದರು. ಇಂದು ಬೆಳಗ್ಗೆ 10 ಗಂಟೆಗೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಬತ್ತೇರಿ ತಲುಪಿದರು.
ರೆಸಾರ್ಟ್‍ನಲ್ಲಿ ಪ್ರಿಯಾಂಕಾ ಮತ್ತು ಸೋನಿಯಾ ಅವರನ್ನು ನಾಯಕರು ಬರಮಾಡಿಕೊಂಡರು. ಮೈಸೂರಿನಲ್ಲಿ ಬಂದಿಳಿದ ಪ್ರಿಯಾಂಕಾ ಮತ್ತು ಸೋನಿಯಾ ರಸ್ತೆ ಮಾರ್ಗವಾಗಿ ಬತ್ತೇರಿ ತಲುಪಿದರು.
ಇತ್ತೀಚೆಗಿನ ಲೋಕಸಭೆ ಚುನಾವಣೆಯಲ್ಲಿ ರಾಯ್ ಬರೇಲಿಯನ್ನು ಪ್ರತಿನಿಧಿಸಲು ರಾಹುಲ್ ಗಾಂಧಿ ನಿರ್ಧರಿಸಿದಾಗ, ವಯನಾಡಿನಲ್ಲಿ ತೆರವಾದ ಸ್ಥಾನಕ್ಕೆ ಉಪಚುನಾವಣೆ ಘೋಷಿಸಬೇಕಾಯಿತು. ಪ್ರಿಯಾಂಕಾ ಅವರನ್ನು ಅಭ್ಯರ್ಥಿ ಎಂದು ಘೋಷಿಸಲಾಗಿದೆ.