ಕಾಸರಗೋಡು: ಸ್ಕೂಟರ್ ಪಲ್ಟಿಯಾಗಿ ಹಿಂಬದಿ ಸವಾರ, ಉದ್ಯಾವರ ಗುತ್ತು ಅಂಬೇಡ್ಕರ್ ನಗರ ನಿವಾಸಿ ಕೂಲಿ ಕಾರ್ಮಿಕ ರಾಜೇಶ್(40)ಮೃತಪಟ್ಟಿದ್ದಾರೆ. ಹೊಸಂಗಡಿಯಿಂದ ಸ್ನೇಹಿತನ ಜತೆ ಶನಿವಾರ ರಾತ್ರಿ ಸ್ಕೂಟರಲ್ಲಿ ಮನೆಗೆ ತೆರಳುವ ಮಧ್ಯೆ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜು ಸನಿಹ ಇಳಿಜಾರು ರಸ್ತೆಯಲ್ಲಿ ಸ್ಕೂಟರ್ ಮಗುಚಿಬಿದ್ದು ಗಂಭೀರ ಗಾಯಗೊಂಡ ರಾಜೇಶ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿದ್ದರು. ಸ್ಕೂಟರ್ ಚಲಾಯಿಸುತ್ತಿದ್ದ ಪಾವೂರು ನಿವಾಸಿ ಉದಯ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರು. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.