ಕುಂಬಳೆ: ಅಂಗಡಿಮೊಗರು ಸಮೀಪದ ಇತಿಹಾಸ ಪ್ರಸಿದ್ಧ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಾರ್ಯದ ಪೂರ್ವಭಾವಿಯಾಗಿ ನಾಳೆ(ಅ.20) ಅನುಜ್ಞಾ ಪ್ರಾರ್ಥನೆ,ಬಲಿವಾಡು ಕೂಟ, ಜೀರ್ಣೋದ್ಧಾರದ ವಿನಂತಿ ಪತ್ರ ಬಿಡುಗಡೆ ಕಾರ್ಯಕ್ರಮ ಜರಗಲಿದೆ.
ಇದರಂಗವಾಗಿ ಅಂದು ಬೆಳಗ್ಗೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ಮಾರ್ಗದರ್ಶನದಂತೆ ಗಣಹೋಮ,ಮೃತ್ಯುಂಜಯ ಹೋಮ, ಬಲಿವಾಡು ಕೂಟ ಹಾಗೂ ದುರ್ಗಾಪೂಜೆ ಸಹಿತ ದಿನಪೂರ್ತಿ ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದೆ. ಬೆಳಗ್ಗೆ ಜೀರ್ಣೋದ್ಧಾರ ಕಾರ್ಯಗಳ ವಿನಂತಿ ಪತ್ರವನ್ನು ಬಿಡುಗಡೆಗೊಳಿಸಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.