HEALTH TIPS

ಎಚ್ಚರ! ಈ ಜ್ಯೂಸ್‌ಗಳನ್ನು ಮಿತಿಮೀರಿ ಕುಡಿದ್ರೆ ಸ್ಟ್ರೋಕ್ ಆಗುತ್ತೆ! ಬೆಚ್ಚಿ ಬೀಳಿಸಿದ ಹೊಸ ಅಧ್ಯಯನ!

 ಸೋಡಾಗಳು ಮತ್ತು ಫ್ರುಟ್ ಜ್ಯೂಸ್‌ಗಳನ್ನು (Juice) ಅತಿಯಾಗಿ ಸೇವಿಸುವವರು ನೀವಾಗಿದ್ದರೆ ಈ ಲೇಖನವನ್ನು ಓದಲೇಬೇಕು, ಏಕೆಂದರೆ ಇಂತಹ (Soft Drinks) ಪಾನೀಯಗಳು ಅತಿಯಾದ ಸಕ್ಕರೆಯಿಂದ ಕೂಡಿರುತ್ತವೆ.

ಅದೂ ಅಲ್ಲದೆ ಇಂತಹ ಪಾನೀಯಗಳ ಅತಿಯಾದ ಸೇವನೆಯು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೊಸ ಅಧ್ಯಯನವು ಈಗ ಕಂಡುಹಿಡಿದಿದೆ.

ಹೀಗಾಗಿ ತಜ್ಞರು ಇಂತಹ ಪಾನೀಯಗಳನ್ನು ಆದಷ್ಟು ಮಿತಿಗೊಳಿಸುವಂತೆ ಇಲ್ಲವೇ ಪೂರ್ತಿಯಾಗಿ ತ್ಯಜಿಸುವಂತೆ ಸಲಹೆ ನೀಡಿದ್ದಾರೆ.

ಹೊಸ ಆವಿಷ್ಕಾರ ನಡೆಸಿದ ಸಂಶೋಧಕರು

ಈ ಆವಿಷ್ಕಾರವು ಹೊಸ ಜಾಗತಿಕ ಸಂಶೋಧನಾ ಅಧ್ಯಯನಗಳ ಭಾಗವಾಗಿದ್ದು, ಕೆನಡಾದ ಮೆಕ್‌ಮಾಸ್ಟರ್ ವಿಶ್ವವಿದ್ಯಾಲಯ ಮತ್ತು ಸ್ಟ್ರೋಕ್ ಸಂಶೋಧಕರ ಅಂತಾರಾಷ್ಟ್ರೀಯ ನೆಟ್‌ವರ್ಕ್ ಸಹಯೋಗದೊಂದಿಗೆ ಗಾಲ್ವೇ ವಿಶ್ವವಿದ್ಯಾಲಯದ ಸಹ-ನೇತೃತ್ವದೊಂದಿಗೆ ನಡೆಸಲಾಗಿದೆ. ಇನ್ನು ಸೋಡಾ, ಫ್ರುಟ್ ಜ್ಯೂಸ್ ಮಾತ್ರವಲ್ಲದೆ ದಿನವೊಂದಕ್ಕೆ ನಾಲ್ಕು ಕಪ್‌ಗಳಿಗಿಂತ ಹೆಚ್ಚು ಕಾಫಿ ಸೇವಿಸುತ್ತೀರಿ ಎಂದಾದರೆ ಅದರಿಂದ ಕೂಡ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಅಧ್ಯಯನ ಹೇಗೆ ನಡೆಸಲಾಗಿದೆ

ಫಿಜ್ಜಿ ಡ್ರಿಂಕ್ಸ್, ಫ್ರುಟ್ ಜ್ಯೂಸ್/ಪಾನೀಯ, ನೀರು, ಟೀ, ಕಾಫಿ ಹೀಗೆ ಎರಡು ಬಗೆಯ ಅಧ್ಯಯನಗಳನ್ನು ನಡೆಸಲಾಗಿದೆ. ಈ ಯೋಜನೆಗೆ 27 ದೇಶಗಳ ಸುಮಾರು 27,000 ಜನರನ್ನು ಆಯ್ದುಕೊಂಡಿದ್ದು ಅದರಲ್ಲಿ ಸುಮಾರು 13,500 ಜನರು ಮೊದಲ ಸ್ಟ್ರೋಕ್‌ಗೆ ತುತ್ತಾಗಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಅತಿಯಾದ ಸಕ್ಕರೆ ಬಳಸಿ ಅತಿಯಾಗಿ ಸಿಹಿಯಾಗಿಸಿದ ಇಲ್ಲವೇ ಡಯೆಟ್ ಕೋಕ್‌ನಂತಹ ಕೃತಕ ಪಾನೀಯಗಳ ಸೇವನೆಯಿಂದ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯ 22% ದಷ್ಟು ಹೆಚ್ಚಿದೆ ಎಂದು ಅಧ್ಯಯನ ಪತ್ತೆಹಚ್ಚಿದೆ. ದಿನಕ್ಕೆ ಎರಡಕ್ಕಿಂತ ಹೆಚ್ಚು ಇಂತಹ ಪಾನೀಯಗಳನ್ನು ಸೇವಿಸಿದರೆ ಈ ಅಪಾಯ ಕಟ್ಟಿಟ್ಟ ಬುತ್ತಿ, ಅದರಲ್ಲಿ ಸಂಶಯವೇ ಇಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.

ಯಾರು ಹೆಚ್ಚು ಅಪಾಯದಲ್ಲಿದ್ದಾರೆ

ಪೂರ್ವ/ಮಧ್ಯ ಯುರೋಪ್ ಮತ್ತು ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದಲ್ಲಿ ವಾಸಿಸುವ ಜನರು ಇತರರಿಗಿಂತ ಹೆಚ್ಚಿನ ಅಪಾಯದಲ್ಲಿದ್ದಾರೆ ಎಂದು ಕಂಡುಬಂದಿದೆ. ಹಣ್ಣಿನ ರಸವನ್ನು ಸಾಂದ್ರೀಕರಣದಿಂದ ತಯಾರಿಸಲಾಗುತ್ತದೆ ಮತ್ತು ಸಕ್ಕರೆಗಳಲ್ಲಿ ಸಂರಕ್ಷಕಗಳನ್ನು ಸೇರಿಸಲಾಗುತ್ತದೆ, ಇದು ಅನಾರೋಗ್ಯ ಮತ್ತು ಪಾರ್ಶ್ವವಾಯು ಅಪಾಯವನ್ನುಂಟುಮಾಡುತ್ತದೆ.

ರಕ್ತಸ್ರಾವದಿಂದ (ಇಂಟ್ರಾಕ್ರೇನಿಯಲ್ ಹೆಮರೇಜ್) ಪಾರ್ಶ್ವವಾಯು ಸಾಧ್ಯತೆಯಲ್ಲಿ 37 ಪ್ರತಿಶತದಷ್ಟು ಹೆಚ್ಚಳಕ್ಕೆ ಇದು ಕಾರಣವಾಗಿದೆ. ಒಂದು ದಿನದಲ್ಲಿ ಅಂತಹ ಎರಡು ಪಾನೀಯಗಳನ್ನು ಸೇವಿಸಿದಾಗ ಅಪಾಯವು ಮೂರು ಪಟ್ಟು ಹೆಚ್ಚಾಗಿದೆ. ಈ ಗುಂಪಿನಲ್ಲಿ ಮಹಿಳೆಯರು ಹೆಚ್ಚು ಅಪಾಯದಲ್ಲಿದ್ದರು ಎಂಬುದು ಕಂಡುಬಂದಿದೆ.

ನೀರು ಮತ್ತು ಟೀ ಸ್ಟ್ರೋಕ್ ಅಪಾಯವನ್ನು ಕಡಿಮೆ ಮಾಡುತ್ತದೆ

ನೀರು ಈ ಅಪಾಯದಿಂದ ಪಾರು ಮಾಡುವ ಸಂರಕ್ಷಕನಾಗಿ ಕಂಡು ಬಂದಿದ್ದು, ಪ್ರತಿದಿನ ಏಳು ಕಪ್‌ಗಳಷ್ಟು ನೀರು ಸೇವಿಸುವುದು ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ ಪಾರ್ಶ್ವವಾಯುವಿನ ಸಾಧ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂಬುದಾಗಿ ವರದಿಯಾಗಿದೆ. ಇದರ ನಡುವೆ, ದಿನಕ್ಕೆ ನಾಲ್ಕು ಕಪ್‌ಗಳಿಗಿಂತ ಹೆಚ್ಚು ಕಾಫಿ ಸೇವನೆಯು ಪಾರ್ಶ್ವವಾಯುವಿನ ಸಾಧ್ಯತೆಯನ್ನು ಶೇಕಡಾ 37% ದಷ್ಟು ಹೆಚ್ಚಿಸಿದೆ, ಆದರೆ ಕಡಿಮೆ ಸೇವನೆಯು ಸ್ಟ್ರೋಕ್ ಅಪಾಯವನ್ನುಂಟು ಮಾಡುವುದಿಲ್ಲ ಎಂಬುದಾಗಿ ವರದಿಯಾಗಿದೆ.

18-20% ದಷ್ಟು ಪಾರ್ಶ್ವವಾಯು ಸಾಧ್ಯತೆಯನ್ನು ಕಡಿಮೆ ಮಾಡುವ ಮೂಲಕ ಟೀ ಉತ್ತಮ ಆಯ್ಕೆಯಾಗಿ ಕಂಡುಬಂದಿದೆ. ಆದರೂ ಮಿತಿ ಮೀರಿದ ಸಕ್ಕರೆಯ ಕಾಫಿ, ಚಹಾವನ್ನು ಹೆಚ್ಚು ಸೇವಿಸುವುದರಿಂದ ಅಪಾಯ ಖಂಡಿತ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇನ್ನು ಬ್ಲ್ಯಾಕ್ ಟೀಯು 29 ಪ್ರತಿಶತದಷ್ಟು ಕಡಿಮೆ ಪಾರ್ಶ್ವವಾಯು ಸಾಧ್ಯತೆಯೊಂದಿಗೆ ಸಂಬಂಧಿಸಿದೆ ಇದರೊಂದಿಗೆ ಗ್ರೀನ್ ಟೀಯು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ಕಂಡುಬಂದಿದೆ.

ಆದರೆ, ಹಾಲು ಸೇರಿಸಿ ಕುಡಿಯುವ ಟೀಯ ಮಿತಿಮೀರಿದ ಸೇವನೆಯು ಪಾರ್ಶ್ವವಾಯು ಅಪಾಯಕ್ಕೆ ಸಂಬಂಧಿಸಿದ ಅಪಾಯಗಳನ್ನು ಹೆಚ್ಚಿಸಲೂಬಹುದು ಎಂದು ತಜ್ಞರು ಸೂಚಿಸಿದ್ದಾರೆ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries