HEALTH TIPS

ಎಣ್ಮಕಜೆ ಗ್ರಾಮ ಪಂಚಾಯತಿಯಿಂದ ಕ್ಷಯ ರೋಗಿಗಳಿಗಿರುವ ಪೋಷಕ ಆಹಾರ ಕಿಟ್ ಹಾಗೂ ಡಯಾಲಿಸಿಸ್ ಕಿಟ್ ವಿತರಣೆ

ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಕುಟುಂಬ ಆರೋಗ್ಯ ಕೇಂದ್ರದ ವತಿಯಿಂದ 2024-25ನೇ ವಾರ್ಷಿಕ ಯೋಜನೆಯಂತೆ  ಕ್ಷಯ ರೋಗಿಗಳಿಗಿರುವ ಪೋಷಕ ಆಹಾರ ಕಿಟ್ ಹಾಗೂ ಡಯಾಲಿಸಿಸ್ ಕಿಟ್ ವಿತರಣೆಯ ಪಂಚಾಯಯಿ ಮಟ್ಟದ ಉದ್ಘಾಟನೆ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಗುರುವಾರ ಜರಗಿತು.


ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಕಿಟ್ ವಿತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಪಂಚಾಯತಿ ವಿವಿಧ ಯೋಜನೆಗಳನ್ನು ಕೈಗೊಂಡಿದ್ದು ಇದರಂತೆ ಕ್ಷಯರೋಗಿಗಳಿಗೆ  2.5 ಲಕ್ಷ ಹಾಗೂ ಡಯಾಲಿಸ್ ಗೆ 2 ಲಕ್ಷ ರೂ ವ್ಯಯಿಸಿ ಕಿಟ್ ವಿತರಿಸುವ ಮೂಲಕ ಬೃಹತ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಮುಂದೆ ಎಫ್ ಎಚ್ ಸಿ ಯನ್ನು ಸಂದರ್ಶಿಸುವ  ರೋಗಿಗಳಿಗೆ ಮತ್ತು ಪಂಚಾಯತಿ ವ್ಯಾಪಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೂ ಯೋಜನೆ ರೂಪೀಕರಿಸಲಾಗುವುದು ಎಂದರು.


ಗ್ರಾ.ಪಂ.ಉಪಾಧ್ಯಕ್ಷೆ ರಮ್ಲ ಅಧ್ಯಕ್ಷತೆ ವಹಿಸಿದ್ದರು. ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್,  ಪಂ.ಸದಸ್ಯೆ ರೂಪವಾಣಿ ಆರ್.ಭಟ್, ಉಷಾ ಕುಮಾರಿ, ಕೇಂದ್ರದ ವೈದಾಧಿಕಾರಿ ಡಾ.ಗ್ರೀಷ್ಮ, ಹೆಲ್ತ್ ಇನ್ಸ್ ಪೆಕ್ಟರ್ ವಸಂತ ಕುಮಾರ್ ಸಭೆಯಲ್ಲಿ ಉಪಸ್ಥಿತರಿದ್ದರು. ಪಿಎಚ್ ಎನ್ ಶಾಂತ ವಂದಿಸಿದರು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries