HEALTH TIPS

ರಾಮನಾಥ ಸಾಂಸ್ಕøತಿಕ ಭವನದಲ್ಲಿ ದಸರಾನಾಡಹಬ್ಬ ಸಮಾರೋಪ, ನೃತ್ಯೋತ್ಸವ

ಕಾಸರಗೋಡು: ಹಲವು ಕಲಾ ಹೃದಯಗಳನ್ನು ಒಟ್ಟುಗೂಡಿಸಿ, ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಮೂಲಕ ಕನ್ನಡ ಕಟ್ಟುವ ಕೆಲಸ ನಡೆಸುತ್ತಿರುವ ಸಂಘ ಸಂಸ್ಥೆಗಳ ಪಾತ್ರ ಮಹತ್ತರವಾದುದು ಎಂದು ಖ್ಯಾತ ವೈದ್ಯೆ ಕಲಾಪೋಷಕಿ ಡಾ. ಜಯಶ್ರೀನಾಗರಾಜ್ ತಿಳಿಸಿದ್ದಾರೆ.

ಅವರು ಕೋಟೆಕಣಿ ಶ್ರೀರಾಮನಾಥ ಸಾಂಸ್ಕøತಿಕ ಭವನ ಸಮಿತಿ ವತಿಯಿಂದ ರಾಮನಾಥ ಸಾಂಸ್ಕøತಿಕ ಭವನದಲ್ಲಿ ಆಯೋಜಿಸಲಾಗಿದ್ದ ದಸರಾನಾಡಹಬ್ಬ ಸಮಾರೋಪ ಹಾಗೂ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂತಾರಾಷ್ಟ್ರೀಯ ನೃತ್ಯಗುರು ಕೋಲಾರ ರಮೇಶ್ ಕಾರ್ಯಕ್ರಮ ಉದ್ಘಾಟಿಸಿದರು. ವಕೀಲ ಸದಾನಂದ ರೈ, ಕಲಾಪೋಷಕಿ ಮೀರಾ ಕಾಮತ್, ಉದ್ಯಮಿಗಳಾದ ರಾಮ ಪ್ರಸಾದ್ ಕಾಸರಗೋಡು, ಕೃಷ್ಣಪ್ರಸಾದ್ ಕೋಟೆಕಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನೃತ್ಯ ವಿದುಷಿ ಅನುಪಮಾ ರಾಘವೇಂದ್ರ, ಸಿಂಧೂ ಭಾಸ್ಕರನ್, ಸುಚಿತ್ರಾ ವಿದ್ಯಾಮಹೇಶ್, ಭವ್ಯಾ, ಸುಶ್ಮಿತಾಯತೀಶ್ ಆಚಾರ್ಯ ಅವರು ಕೋಟೆಕಣಿ ಶ್ರೀರಾಮನಾಥ ಸಾಂಸ್ಕøತಿಕ ಭವನ ಹೊಸ ಯೋಜನೆ'ಹೆಜ್ಜೆ-ಗೆಜ್ಜೆ'ಗೆ ಚಾಲನೆ ನೀಡಿದರು.

ಈ ಸಂದರ್ಭ ಕರ್ನಾಟಕ ಗಡಿನಾಡ ಚೇತನ ಪ್ರಶಸ್ತಿ ಪಡೆದ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಗೌರವ ಡಾಲ್ಟರೇಟ್ ಪಡೆದ ಡಾ. ವೆÉೂಠೊಂಕಟ್ರಮಣ ಹೊಳ್ಳ ಹಾಗೂ ಅಂತಾರಾಷ್ಟ್ರೀಯ ನೃತ್ಯಗುರು ಕೋಲಾರ ರಮೇಶ್ ಅವರನ್ನು ಗೌರವಿಸಲಾಯಿತು. ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಪ್ರಾರ್ಥನೆ ಹಾಡಿದರು. ಭವನಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೊಟೆಕಣಿ ಸ್ವಾಗತಿಸಿದರು. ಕಾವ್ಯಾಕುಶಲ ಕಾರ್ಯಕ್ರಮ ನಿರೂಪಿಸಿದರು. ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ನೃತ್ಯ ರೂಪಕ, ಜಾನಪದ, ಭಾವಗೀತೆಗಳ ಗಾಯನ, ನೃತ್ಯಾಂಜಲಿ ನಡೆಯಿತು. ಕೋಲಾರ ರಮೇಶ್  ನಿರ್ದೇಶನದಲ್ಲಿ ಬೆಂಗಳೂರಿನ ಪುಷ್ಪಾಂಜಲಿ ನಾಟ್ಯಕಲಾ ಅಕಾಡಮಿಯ ಸದಸ್ಯರಿಂದ ಕುವೆಂಪು ರಾಮಾಯಣ ದರ್ಶನ ನೃತ್ಯ ರೂಪಕ ನಡೆಯಿತು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries