ವಯನಾಡ್: ವಯನಾಡ್‌ನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಸಂಕಷ್ಟಕ್ಕೀಡಾದವರಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪುನರ್ವಸತಿ ಕಲ್ಪಿಸುವಲ್ಲಿ ನಿರ್ಲಕ್ಷ ತೋರುತ್ತಿದೆ ಎಂದು ಚುನಾವಣಾ ಪ್ರಚಾರದ ವೇಳೆ ಪ್ರಿಯಾಂಕಾ ಗಾಂಧಿ ವಾದ್ರಾ ಮಂಗಳವಾರ ಆರೋಪಿಸಿದ್ದಾರೆ.

ವಯನಾಡ್ ಲೋಕಸಭಾ ಕ್ಷೇತ್ರದ ಉಪ ಚುನವಾಣೆಗೆ ಯುಡಿಎಫ್ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಿಯಾಂಕಾ, ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
'ಕೇಂದ್ರ ಸರ್ಕಾರ ತೆಗೆದುಕೊಂಡ ನಿಲುವು ಜನರು ಮತ್ತು ರಾಷ್ಟ್ರದ ಬಗ್ಗೆ ಅಗೌರವ ತೋರಿರುವುದನ್ನು ಸೂಚಿಸುತ್ತದೆ. ಕಳೆದ 10 ವರ್ಷಗಳ ಆಡಳಿತದಲ್ಲಿ ಮಾಡಿದ ನೀತಿಗಳಿಂದ ಇದು ಸ್ಪಷ್ಟವಾಗಿದೆ. ಅಲ್ಲದೆ ಅವರು ಈವರೆಗಿನ ಅಧಿಕಾರದಲ್ಲಿ ರೂಪಿಸಿದ ನೀತಿಗಳು ಯಾವಾಗಲೂ ಐದರಿಂದ ಆರು ಉದ್ಯಮಿ ಸ್ನೇಹಿತರ ಪರವಾಗಿರುತ್ತವೆಯೇ ಹೊರತು ಜನರಿಗೆ ಪ್ರಯೋಜನವನ್ನು ನೀಡುವುದಿಲ್ಲ' ಎಂದು ವಾಗ್ದಾಳಿ ನಡೆಸಿದರು.
ಭೂಕುಸಿತ ಸಂಭವಿಸಿದ ವೇಳೆ ವಯನಾಡ್‌ಗೆ ಭೇಟಿಯಿತ್ತ ಮೋದಿಯವರು ಜನರನ್ನು ಭೇಟಿಯಾಗಿ ನೆರವು ನೀಡುವುದಾಗಿ ಹೇಳಿದ್ದರು. ಆದರೆ ತಿಂಗಳುಗಳು ಕಳೆದರೂ, ಕೇಂದ್ರ ಸರ್ಕಾರ ಯಾವುದೇ ಅರ್ಥಿಕ ನೆರವು ಅಥವಾ ಪುನರ್ವಸತಿ ಸೌಲಭ್ಯ ಒದಗಿಸಲಿಲ್ಲ ಎಂದು ಆರೋಪಿಸಿದರು.