ತ್ರಿಶೂರ್ : ಮುಂದುವರಿದ ಸಮುದಾಯ ನಿಗಮವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಅಗತ್ಯ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಸಚಿವ ರಾಜನ್ ಹೇಳಿದರು. ಅನೇಕ ಪ್ರಗತಿಪರ ಸಮುದಾಯಗಳ ಕೆಲವು ವರ್ಗಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರ ಅರಿತು ಅವುಗಳನ್ನು ಪರಿಹರಿಸಲು ಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ಇತ್ತೀಚೆಗೆ ನಡೆದ ಪುಷ್ಪಕ ಬ್ರಾಹ್ಮಣ ಸೇವಾ ಸಂಘ 56 ನೇ ರಾಷ್ಟ್ರೀಯ ಸಮ್ಮೇಳನವನ್ನು ತ್ರಿಶೂರ್ ನಲ್ಲಿ ಉದ್ಘಾಟಿಸಿ ಮಾತನಾಡಿದರು.
ಪುಷ್ಪಕ ಬ್ರಾಹ್ಮಣ ಸೇವಾ ಸಂಘ ಕೇಂದ್ರ ಸಮಿತಿ ಅಧ್ಯಕ್ಷ ಡಾ. ಪಿ. ಗೋಪಿನಾಥನ್ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದಲ್ಲಿ ಪುರವನಾಟ್ಟುಕರ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಸದ್ಭಾವಾನಂದ ಆಶೀರ್ವಚನ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸಂಘಟನೆಯ ಪ್ರಶಸ್ತಿಗಳನ್ನು ಮಾಜಿ ಸ್ಪೀಕರ್ ಅಡ್ವ. ತೆರಂಬಿಲ್ ರಾಮಕೃಷ್ಣನ್ ವಿತರಿಸಿದರು. .
ಪಿ.ಆರ್. ಹರಿ, ಟಿ ಆರ್ ಹರಿ ನಾರಾಯಣನ್, ಎಲ್ . ಪಿ ವಿಶ್ವನಾಥನ್, ಕೆ.ಎ. ದೇವಕಿಕುಟ್ಟಿ, ಪಿ.ಆರ್. ರಾಮಚಂದ್ರನ್, ವಿ.ಎನ್. ಅನಿಲ್ ಮತ್ತು ಜಂಟಿ ಸಂಚಾಲಕ ಆನಂದ ಕೇಶವನ್ ಮಾತನಾಡಿದರು. ಕಾಸರಗೋಡು ಜಿಲ್ಲೆಯಿಂದ 60 ಮಂದಿ ಸದಸ್ಯರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.