ಕಾಸರಗೋಡು: ಅನುದಾನಿತ ಶಾಲಾ ಅಧ್ಯಾಪಕರ ವೇತನ ಮೊಟಕುಗೊಳಿಸುವ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಏಯ್ಡೆಡ್ ಹೈಯರ್ ಸೆಕೆಂಡರಿ ಟೀಚರ್ಸ್ ಅಸೋಸಿಯೇಶನ್ ನೇತೃತ್ವದಲ್ಲಿ ಧರಣಿ ನಡೆಯಿತು.
ಕೆ.ಪಿ.ಸಿ.ಸಿ. ಕಾರ್ಯಕಾರಿ ಸಮಿತಿ ಸದಸ್ಯ ಹಕೀಂ ಕುನ್ನಿಲ್ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಎಚ್‍ಎಸ್‍ಟಿಎ ರಾಜ್ಯ ಸಂಘಟನಾ ಕಾರ್ಯದರ್ಶಿ ಜೀಜಿ ತೋಮಸ್ ಮುಖ್ಯ ಭಾಷಣ ಮಾಡಿದರು. ಮೇಜೋ ಜೋಸೆಫ್, ಶಾಜಿ ಕೆ, ರಾಜೇಶ್ ಆರ್.ಶೆಟ್ಟಿ, ಶ್ರುತಿ ಕೆ.ಆರ್, ವಿಶಾಲಾಕ್ಷಿ ಪಿ.ಎನ್. ಮೊದಲಾದವರು ಮಾತನಾಡಿದರು.