ಪೆರ್ಲ :ಪೆರ್ಲ ಶ್ರೀ ಅಯ್ಯಪ್ಪ ಭಜನಾ ಮಂದಿರದ 48ನೇ ವಾರ್ಷಿಕ ಸಮಾರಂಭದ ಅಂಗವಾಗಿ ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವ ಡಿ.3ರಿಂದ 5ರ ವರೆಗೆ ಶ್ರೀ ಅಯ್ಯಪ್ಪ ಮಂದಿರದಲ್ಲಿ ಜರುಗಲಿದೆ. ಇದೇ ಸಂದರ್ಭ ಭಜನಾಮಂದಿರದ ವಠಾರದಲ್ಲಿ ನಿರ್ಮಿಸಲಾಗಿರುವ ನೂತನ ಸಭಾಂಗಣದ ಲೋಕಾರ್ಪಣೆ ನಡೆಯುವುದು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಅವರ ಶುಭಾಶೀರ್ವಾದ ಹಾಗೂ ಶುಲುವಾಲುಮೂಲೆ ಶಿವಸುಬ್ರಹ್ಮಣ್ಯ ಭಟ್ ಅವರ ಪೌರೋಹಿತ್ಯದಲ್ಲಿ ಕಾರ್ಯಕ್ರಮ ನಡೆಯುವುದು.
ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿ ರಚನಾ ಸಭೆ ಮಂದಿರದಲ್ಲಿ ಜರುಗಿತು. ಶ್ರೀಧರ ಗುರುಸ್ವಾಮಿ ಬಜಕೂಡ್ಲು ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ವ್ಯಾಪ್ತಿಯ ಭಜನಾ ಮಂದಿರ ಸಮಿತಿ ಪದಾಧಿಕಾರಿಗಳು, ಗುರುಸ್ವಾಮಿಗಳು ಹಾಗೂ ಇತರ ಭಕ್ತಾದಿಗಳನ್ನು ಒಟ್ಟುಸೇರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಎಣ್ಮಜೆ ಸುಧೀರ್ ಕುಮಾರ್ ಶೆಟ್ಟಿ ಗೌರವಾಧ್ಯಕ್ಷ, ಶ್ರೀಧರ ಗುರುಸ್ವಾಮಿ ಬಜಕೂಡ್ಲು ಅಧ್ಯಕ್ಷ ಹಾಗೂ ಪದ್ಮನಾಭ ಸುವರ್ಣ ಬಜಕೂಡ್ಲು ಪ್ರಧಾನ ಕಾರ್ಯದರ್ಶಿಯಾಗಿರುವ ಸಮಿತಿ ರಚಿಸಲಾಯಿತು. ಮುಂದೆ ವಿವಿಧ ಉಪಸಮಿತಿ ರಚಿಸಿ ತಿರುವಿಳಕ್ಕ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ತೀರ್ಮಾನಿಸಲಾಯಿತು. ಮಂದಿರ ಸಮಿತಿ ಪದಾಧಿಕಾರಿಗಳು, ಗುರುಸ್ವಾಮಿಗಳು, ಭಕ್ತಾದಿಗಳು ಪಾಲ್ಗೊಂಡಿದ್ದರು. ಶಿವರಾಮ ಬೇಂಗಪದವು ಸ್ವಾಗತಿಸಿದರು. ಪದ್ಮನಾಭ ಸುವರ್ಣ ವಂದಿಸಿದರು.