ಕಾಸರಗೋಡು: ತಳಂಗರೆ ಶಾಲೆಯಲ್ಲಿ ನಡೆದ ಶಾಲಾ ಕಲೋತ್ಸವ ವೇಳೆ ದಾಂಧಲೆ ನಡೆಸಿ, ಕಚೇರಿ ಪೀಠೋಪಕರಣ ಹಾನಿಯೆಸಗಿದ ಪ್ರಕರಣದ ಮುಖ್ಯ ಆರೋಪಿ ಮಹಮ್ಮದ್ ಶಿಹ್‍ಬಾನ್ ಎಂಬಾತನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಾಲಾ ಕಲೋತ್ಸವದ ಕೊನೆಯ ದಿನವಾದ ಅ. 9ರಂದು ಮಹಮ್ಮದ್ ಶಿಹ್‍ಬಾನ್ ನೇತೃತ್ವದ 20ಕ್ಕೂ ಹೆಚ್ಚುಮಂದಿಯ ತಂಡ ಶಾಲೆಯೊಳಗೆ ಅನಧಿಕೃತವಾಗಿ ನುಗ್ಗಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ, ಶಾಲಾ ಸಿಬ್ಬಂದಿಗೆ ಹಲ್ಲೆಗೈದಿರುವುದಲ್ಲದೆ, ಶಾಲಾ ಕಚೇರಿ ಪೀಠೋಪಕರಣಗಳಿಗೆ ಹಾನಿಯೆಸಗಿರುವ ಬಗ್ಗೆ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.