ಕಾಸರಗೋಡು: ಉದ್ಯೋಗ ಭರವಸೆ ನೀಡಿ ಹಲವರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಪ್ರಕರಣದ ಆರೋಪಿ, ಮಾಜಿ ಡಿವೈಎಫ್‍ಐ ನೇತಾರೆ ಹಾಗೂ ಪುತ್ತಿಗೆ ಪಂಚಾಯಿತಿ ಬಾಡೂರು ಎಎಲ್‍ಪಿ ಶಾಲಾ ಶಿಕ್ಷಕಿ ಸಚಿತಾ ರೈ (27)ವಿರುದ್ಧ ಬದಿಯಡ್ಕ ಠಾಣೆಯಲ್ಲಿ ಮತ್ತೊಂದು ಕೇಸು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 13ಕ್ಕೇರಿದೆ.
ಪೊಲೀಸ್ ಠಾಣೆ ವ್ಯಾಪ್ತಿಯ ಪಳ್ಳತ್ತಡ್ಕ ನೆಲ್ಲಿಕಳಯ ನಿವಾಸಿ ಅರವಿಂದಕ್ಷನ್ ಎಂಬವರ ಪುತ್ರಿ ಅಮೃತಾ ಅವರ ದೂರಿನ ಮೇರೆಗೆ ಈ ಕೇಸು. ಉದ್ಯೋಗದ ಭರವಸೆ ನೀಡಿ ತನ್ನಿಂದ 2023 ಜನವರಿಯಿಂದ 2024 ಜ. 11ರ ವರೆಗೆ 12.71ಲಕ್ಷ ರೂ. ಪಡೆದಿದ್ದು, ಉದ್ಯೋಗ ನೀಡದೆ, ಹಣವನ್ನೂ ವಾಪಾಸು ಮಾಡದೆ ವಂಚಿಸಿರುವುದಗಿ ದೂರಿನಲ್ಲಿ ತಿಳಿಸಲಾಗಿದೆ.
ನ್ಯಾಯಾಲಯಕ್ಕೆ ಶರಣಾಗಲು ಕಾಸರಗೋಡು ವಿದ್ಯಾನಗರಕ್ಕೆ ತನ್ನ ಎಳೆಯ ಮಗುವಿನೊಂದಿಗೆ ಗುರುಗವಾರ ಆಗಮಿಸಿದ ಈಕೆಯನ್ನು ಕಾಸರಗೋಡು ಡಿವೈಸ್‍ಪಿ ಸಿ.ಕೆ ಸುನಿಲ್ ನೇತೃತ್ವದ ಪೊಲೀಸರ ತಂಡ ಬಂಧಿಸಿದ್ದು, ನ್ಯಾಯಾಲಯದ ಆದೇಶ ಪ್ರಕಾರ ಕಣ್ಣೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಕುಂಬಳೆ, ಮಂಜೇಶ್ವರ, ಬದಿಯಡ್ಕ ಹಾಗೂ ಉಪ್ಪಿನಂಗಡಿ ಠಾಣೆಗಳಲ್ಲಿ ವಂಚನಾ ಪ್ರಕರಣಕ್ಕೆ ಸಂಬಂಧಿಸಿ ಹಲವು ಪ್ರಕರಣ ದಾಖಲಾಗಿದೆ.