ಕಾಸರಗೋಡು: ಕೂಡ್ಲು ಗ್ರಾಮಾಧಿಕಾರಿ ಕಚೇರಿಗಾಗಿ ಉಳಿಯತಡ್ಕ ನ್ಯಾಷನಲ್ ನಗರದಲ್ಲಿ ಹೊಸದಾಗಿ ನಿರ್ಮಿಸಿರುವ ಕಟ್ಟಡದ ಉದ್ಘಾಟನೆ 2023 ಮಾರ್ಚ್ 30 ರಂದು ನಡೆಸಲಾಗಿದ್ದರೂ, ಇದುವರೆಗೆ ಕಾರ್ಯಾರಂಬಿಸದಿರುವುದು ಖಂಡನೀಯ. ಇಂದಿಗೂ ಎರಿಯಾಲಿನ ಸಂಚಾರ ಯೋಗ್ಯವಲ್ಲದ ಸ್ಥಳದಲ್ಲಿ ಕಾರ್ಯಾಚರಿಸುತ್ತಿರುವ ಕಚೇರಿಯನ್ನು ತಕ್ಷಣ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ರಾಮದಾಸ್ ನಗರ ಲೋಕಲ್ ಸಮ್ಮೇಳನ ಕೇರಳ ಸರ್ಕಾರವನ್ನು ಒತ್ತಾಯಿಸಿದೆ.
ಪಾರಕಟ್ಟೆಯ 'ಬುದ್ಧದೇವ್ ಭಟ್ಟಾಚಾರ್ಯ ನಗರ'ದಲ್ಲಿ ಜರಗಿದ ಸಮ್ಮೇಳನವನ್ನು ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಮಂಡಳಿ ಸದಸ್ಯ ಕೆ ಆರ್ ಜಯಾನಂದ ಉದ್ಘಾಟಿಸಿದರು. ಎಂ ಅಶೋಕ ರೈ, ಸಿ. ಶೋಭಲತಾ, ಜಲೀಲ್ ಅವರನ್ನು ಒಳಗೊಂಡ ಅಧ್ಯಕ್ಷೀಯ ಮಂಡಳಿ ಸಮ್ಮೇಳನವನ್ನು ನಿಯಂತ್ರಿಸಿತು. ಕಾರ್ಯದರ್ಶಿ ಕೆ. ಭುಜಂಗ ಶೆಟ್ಟಿ ವರದಿ ಮಂಡಿಸಿದರು. ಶಾಸಕ ಸಿ ಎಚ್ ಕುಂಚ್‍ಂಬು, ಎಂ ಸುಮತಿ, ಕೆ ಎ ಮೊಹಮದ್ ಹನೀಫ್, ಟಿ ಕೆ ರಾಜನ್, ಟಿ ಎಂ ಎ ಕರೀಮ್, ಶಾಂತಕುಮಾರಿ, ಎಂ ಕೆ ರವೀಂದ್ರನ್, ಅನಿಲ್, ಎ ರವೀಂದ್ರನ್, ಕೆ ರವೀಂದ್ರನ್, ಪಿ.ಶಿವಪ್ರಸಾದ್, ಪಿ ವಿ ಕುಞಂಬು, ಎಸ್ ಸುನಿಲ್, ಕೆ ವಿ ರಮೇಶಸ್, ಅಜಿತ್ ಕುಮಾರ್, ರಾಬರ್ಟ್ ಕ್ರಾಸ್ತಾ, ನಂದನ್, ಲೀನ ಉಪಸ್ಥಿತರಿದ್ದರು. ಕೆ ಎಂ ಮೊಹಮದ್ ಸ್ವಾಗತಿಸಿದರು. ಕೆ ಪಿ ವಿಜಯಚoದ್ರನ್ ವಂದಿಸಿದರು. ಮೀಪುಗುರಿ-ಉದಯಗಿರಿ ರಸ್ತೆಯನ್ನು ಅಗಲಗೊಳಿಸಬೇಕು, ಮಧೂರು ಆರೋಗ್ಯ ಕೇಂದ್ರವನ್ನು ಉಳಿಯತಡ್ಕಕ್ಕೆ ಸ್ಥಳಾಂತರಿಸಬೇಕು ಮುಂತಾದ ಬೇಡಿಕೆಗಳ ಠರಾವು ಸಮ್ಮೇಳನ ಅಂಗೀಕರಿಸಿತು. ನೂತನ ಕಾರ್ಯದರ್ಶಿಯಾಗಿ ಕೆ ಭುಜಂಗ ಶೆಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.