ನವದೆಹಲಿ: ಮಗಳನ್ನು ಹಾಗೂ ಕುಟುಂಬದ ಇತರ ಸದಸ್ಯರನ್ನು ಕೊಲೆ ಮಾಡಿದ ಆರೋಪದ ಅಡಿಯಲ್ಲಿ ಮರಣ ದಂಡನೆಗೆ ಗುರಿಯಾಗಿದ್ದ ಪುಣೆಯ ವಿಶ್ವಜಿತ್ ಅವರನ್ನು ಸುಪ್ರೀಂ ಕೋರ್ಟ್ ಗುರುವಾರ ದೋಷಮುಕ್ತಗೊಳಿಸಿದೆ.
ನವದೆಹಲಿ: ಮಗಳನ್ನು ಹಾಗೂ ಕುಟುಂಬದ ಇತರ ಸದಸ್ಯರನ್ನು ಕೊಲೆ ಮಾಡಿದ ಆರೋಪದ ಅಡಿಯಲ್ಲಿ ಮರಣ ದಂಡನೆಗೆ ಗುರಿಯಾಗಿದ್ದ ಪುಣೆಯ ವಿಶ್ವಜಿತ್ ಅವರನ್ನು ಸುಪ್ರೀಂ ಕೋರ್ಟ್ ಗುರುವಾರ ದೋಷಮುಕ್ತಗೊಳಿಸಿದೆ.
ಅನುಮಾನ ಒಂದನ್ನೇ ಆಧಾರವಾಗಿ ಇರಿಸಿಕೊಂಡು ಶಿಕ್ಷೆ ವಿಧಿಸಲು ಅವಕಾಶ ಇಲ್ಲ ಎಂದು ನ್ಯಾಯಮೂರ್ತಿಗಳಾದ ಬಿ.ಆರ್.
ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯು ತನ್ನ ಪತ್ನಿ ಮತ್ತು ತಾಯಿಯ ಜೊತೆ ಮತ್ತೆ ಮತ್ತೆ ಜಗಳ ತೆಗೆಯುತ್ತಿದ್ದುದನ್ನು ಕಂಡಿದ್ದಾಗಿ ನೆರೆಮನೆಯ ವ್ಯಕ್ತಿಯೊಬ್ಬರು ನೀಡಿದ್ದ ಸಾಕ್ಷ್ಯವನ್ನು ಪೀಠವು ತಿರಸ್ಕರಿಸಿದೆ. 'ಶಂಕೆಯು ಅದೆಷ್ಟೇ ಪ್ರಬಲವಾಗಿದ್ದರೂ, ಅದು ಸಕಾರಣದ ಅನುಮಾನದ ಆಚೆಗೆ ಪುರಾವೆಯ ಸ್ಥಾನವನ್ನು ಪಡೆದುಕೊಳ್ಳುವುದಿಲ್ಲ. ಇದು ಕಾನೂನಿನ ಅಡಿಯಲ್ಲಿ ಒಪ್ಪಿತ ವಿಚಾರ. ಆರೋಪಿಯನ್ನು ಶಂಕೆ, ಅನುಮಾನದ ಆಧಾರದಲ್ಲಿಯೇ ಶಿಕ್ಷೆಗೆ ಗುರಿಪಡಿಸಲಾಗದು. ಸಕಾರಣದ ಅನುಮಾನದ ಆಚೆಗೆ ಅಪರಾಧ ಸಾಬೀತಾಗದೆ ಇದ್ದರೆ, ಆರೋಪಿಯನ್ನು ಅಮಾಯಕ ಎಂದೇ ಪರಿಗಣಿಸಬೇಕಾಗುತ್ತದೆ' ಎಂದು ಪೀಠ ವಿವರಿಸಿದೆ.
ಅಪರಾಧ ನಡೆದ ಆರು ದಿನಗಳ ನಂತರ ನೆರೆಮನೆಯ ವ್ಯಕ್ತಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂಬುದನ್ನು ಕೋರ್ಟ್ ಗುರುತಿಸಿದೆ. ಅಲ್ಲದೆ, ಆ ವ್ಯಕ್ತಿಯ ಹೇಳಿಕೆಗೆ ಪೂರಕವಾಗಿ ಬೇರೆ ಯಾರೂ ಹೇಳಿಕೆ ನೀಡಿಲ್ಲ ಎಂದು ಹೇಳಿದೆ. ಅಲ್ಲದೆ, ನೆರೆಮನೆಯ ವ್ಯಕ್ತಿಯ ಹೇಳಿಕೆಯು ಆತ ಅಪರಾಧ ಕೃತ್ಯವನ್ನು ನೇರವಾಗಿ ಕಂಡಿದ್ದ ಎಂಬುದನ್ನು ಸಾಬೀತು ಮಾಡುವುದಿಲ್ಲ ಎಂದೂ ಕೋರ್ಟ್ ಹೇಳಿದೆ.