ಕೊಚ್ಚಿ: ಎಸ್‍ಎಫ್‍ಐ ರಾಜ್ಯ ಕಾರ್ಯದರ್ಶಿ ಪಿ.ಎಂ.ಅರ್ಶೋ ಅವರು ಎರ್ನಾಕುಳಂ ಮಹಾರಾಜ ಕಾಲೇಜಿನ 7ನೇ ಸೆಮಿಸ್ಟರ್ ಆರ್ಕಿಯಾಲಜಿ ವಿದ್ಯಾರ್ಥಿ. ಆದರೆ ಆರ್ಶೋ ಕಾಲೇಜಿಗೆ ಗೈರುಹಾಜರಾಗಿ ಬಹಳ ದಿನಗಳಾಗಿವೆ. ಹಾಜರಾಗದಿರುವ ಕಾರಣ ನೀಡದಿದ್ದಲ್ಲಿ ಕಾಲೇಜಿನಿಂದ ಹೊರಹಾಕಲಾಗುವುದು ಎಂದು ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಅರ್ಶೋ ಅವರ ಪೋಷಕರಿಗೆ ಪ್ರಾಂಶುಪಾಲರು ಈಗಾಗಲೇ ತತ್ಸಂಬಂಧಿ ಸೂಚನೆ ನೀಡಿದ್ದಾರೆ.
ಆದರೆ, ಆರನೇ ಸೆಮಿಸ್ಟರ್‍ನ ನಂತರ ನಿರ್ಗಮನ ಆಯ್ಕೆಯನ್ನು ತೆಗೆದುಕೊಳ್ಳಲಿರುವೆ ಎಂದು ಆರ್ಶೋ ಕಾಲೇಜಿಗೆ ತಿಳಿಸಿದ್ದು, ಈ ಬಗ್ಗೆ ಕಾಲೇಜು ಅಧಿಕಾರಿಗಳು ವಿಶ್ವವಿದ್ಯಾಲಯದ ಅಭಿಪ್ರಾಯವನ್ನು ಕೇಳಿದ್ದಾರೆ. ಸಂಪೂರ್ಣ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ನಿರ್ಗಮನ ಆಯ್ಕೆಯನ್ನು ನೀಡುವಲ್ಲಿ ಕೆಲವು ಗೊಂದಲವಿದೆ ಎನ್ನಲಾಗಿದೆ.