HEALTH TIPS

'ಲಾವೊ ರಾಮಾಯಣ' ವೀಕ್ಷಿಸಿದ ಪ್ರಧಾನಿ ಮೋದಿ

 ವಿಯನ್‌ಟಿಯಾನ್‌: ಲಾವೊಸ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ, ಉಭಯ ದೇಶಗಳ ನಡುವಣ ಪಾರಂಪರಿಕ ಮತ್ತು ನಾಗರಿಕ ಬಾಂಧವ್ಯದ ಪ್ರತೀಕ ಎನ್ನಲಾದ 'ರಾಮಾಯಣ'ದ ಲಾವೊಂಟಿಯಾನ್ ಆವೃತ್ತಿಯನ್ನು ವೀಕ್ಷಿಸಿದರು.

ಲಾವೊಸ್‌ನ ರಾಜಧಾನಿಯಲ್ಲಿ ನಡೆಯಲಿರುವ ಅಸಿಯಾನ್-ಭಾರತ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಇಲ್ಲಿಗೆ ಆಗಮಿಸಿದ್ದಾರೆ.

ಫಲಕ್ ಫಲಂ ಎಂದು ಹೆಸರಿಸಲಾದ 'ಲಾವೊ ರಾಮಾಯಣ' ಭಾಗದ ಪ್ರದರ್ಶನವನ್ನು ಅವರು ವೀಕ್ಷಿಸಿದರು. ಲುಅಂಗ್‌ ಪ್ರಬಂಗ್‌ನ ಹೆಸರಾಂತ ರಾಯಲ್‌ ರಂಗತಂಡವು ಈ ಸಂಚಿಕೆಯನ್ನು ಪ್ರಸ್ತುತಪಡಿಸಿತು.

ಸಂಸ್ಥೆಯ ವೆಬ್‌ಸೈಟ್‌ನ ಮಾಹಿತಿ ಅನುಸಾರ, ಲಾವೊ ರಾಮಾಯಣ ಆವೃತ್ತಿಯು ಭಾರತದ ಮೂಲ ಆವೃತ್ತಿಗಿಂತಲೂ ಭಿನ್ನವಾಗಿದೆ. ಬೌದ್ಧ ಮಿಷನರಿಗಳು 16ನೇ ಶತಮಾನದಲ್ಲಿ ಇಲ್ಲಿ ಪರಿಚಯಿಸಿದರು.

ಈ ಕುರಿತು 'ಎಕ್ಸ್‌'ನಲ್ಲಿ ಮಾಹಿತಿ ಹಂಚಿಕೊಂಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಈ ಪ್ರದರ್ಶನವು ಉಭಯ ದೇಶಗಳ ನಡುವಿನ ಪಾರಂಪರಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಬಿಂಬಿಸಿತು ಎಂದಿದ್ದಾರೆ.

ಇದಕ್ಕೂ ಮೊದಲು ಪ್ರಧಾನಿಯವರು ಲವೊ ಪಿಡಿಆರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಅಲ್ಲಿ ಹಲವು ಹಿರಿಯ ಬೌದ್ಧ ಭಿಕ್ಕುಗಳು ಪ್ರಧಾನಿಯವರಿಗೆ ಶುಭಹಾರೈಸಿದರು. ಈ ಕಾರ್ಯಕ್ರಮದಲ್ಲಿ ಹಲವು ಪ್ರಮುಖರು ಭಾಗವಹಿಸಿದ್ದರು.

'ಸಾಂಸ್ಕೃತಿಕ ಬಾಂಧವ್ಯದ ಕೊಂಡಿ ಬೇರೂರಿದೆ. ಪಾರಂಪರಿಕವಾದ ಹಲವು ತಾಣಗಳನ್ನು ಸಂರಕ್ಷಿಸಲು ಲಾವೊ ಪಿಡಿಆರ್ ಜೊತೆಗೂಡಿ ಕಾರ್ಯನಿರ್ವಹಿಸಲು ಭಾರತಕ್ಕೆ ಹೆಮ್ಮೆಎನಿಸಲಿದೆ' ಎಂದು ಮೋದಿ ಅವರು ಎಕ್ಸ್‌ನಲ್ಲಿ ಹೇಳಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries