ಕಾಸರಗೋಡು: ಕೇರಳ ಮಹಿಳಾ ಆಯೋಗ ಆಯೋಜಿಸಿರುವ ಕಾಸರಗೋಡು ಜಿಲ್ಲಾ ಅದಾಲತ್ ಅಕ್ಟೋಬರ್ 18 ರಂದು ಬೆಳಗ್ಗೆ 10ಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆಯಲಿದೆ. ಅದಾಲಂನಲ್ಲಿ ಹೊಸದಗಿ ದೂರು ಸಲ್ಲಿಸುವವರಿಗೂ ಅವಕಾಶ ಕಲ್ಪಿಸಲಾಗುವುದು.
ಕೋಯಿಕ್ಕೋಡ್ ಜಿಲ್ಲಾ ಪಂಚಾಯತ್ ಕಚೇರಿ ಕಟ್ಟಡದ ಕೆಳ ಮಹಡಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಉತ್ತರ ಪ್ರಾದೇಶಿಕ ಕಚೇರಿಯಲ್ಲಿಯೂ ದೂರುಗಳನ್ನು ಸಲ್ಲಿಸಬಹುದಾಗಿದೆ. ದೂರು ಸಲ್ಲಿಸಲು ಇಮೇಲ್ ಞತಿಛಿಞಞಜ@gmಚಿiಟ.ಛಿom. ವಿಳಾಸವನ್ನು ಬಳಸಿಕೊಳ್ಳಬಹುದಾಗಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(0497-2377590)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.