HEALTH TIPS

ಸುದ್ದಿ ಮತ್ತು ವಿಶ್ಲೇಷಣೆಯನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲದ ಕಾಲವಿದು: ಸಚಿವ ಪಿ.ರಾಜೀವ್: ಕೆ.ಯು.ಡಬ್ಲ್ಯು.ಜೆ.ರಾಜ್ಯ ಸಮ್ಮೇಳನ ಉದ್ಘಾಟಿಸಿ ಅಭಿಮತ

ಕೊಚ್ಚಿ: ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಪರಿಗಣಿಸಲಾಗಿದೆ. ಮಾಧ್ಯಮಗಳು ಸುದ್ದಿಯ ವಿಶ್ವಾಸಾರ್ಹತೆಯನ್ನು ಕಾಪಾಡಬೇಕು. ಸುದ್ದಿಗಳು ವಾಸ್ತವಿಕ ಮತ್ತು ವಿಶ್ಲೇಷಣೆ ಸ್ವತಂತ್ರವಾಗಿರಬೇಕು. ಆದರೆ ಈಗ ಸುದ್ದಿ ಮತ್ತು ವಿಶ್ಲೇಷಣೆಯನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ಕೈಗಾರಿಕಾ ಸಚಿವ ಪಿ.ರಾಜೀವ್ ಹೇಳಿದ್ದಾರೆ. 

ಪಾಲರಿವಟ್ಟಂನ ರೆನೈ ಕೊಲಿಜಿಯಂನಲ್ಲಿ ಕೇರಳ ರಾಜ್ಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ(ಕೆ.ಯು.ಡಬ್ಲ್ಯು.ಜೆ) ದ 60ನೇ ಪ್ರತಿನಿಧಿ ಸಭೆಯನ್ನು ನಿನ್ನೆ ಸಚಿವರು ಉದ್ಘಾಟಿಸಿ ಮಾತನಾಡಿದರು. 

ಪತ್ರಿಕೋದ್ಯಮ ಹಳೆಯ ಪದ್ಧತಿಯಿಂದ ಸಾಕಷ್ಟ್ಟು ಬದಲಾಗಿದ್ದು, ವ್ಯಕ್ತಿಯ ಧ್ವನಿ ಇದ್ದರೆ ಎಐ ಈಗ ಸುದ್ದಿ ಓದಬಹುದು ಎಂದು ಸಚಿವ ಪಿ.ರಾಜೀವ್ ಹೇಳಿದರು.

ಪತ್ರಿಕೋದ್ಯಮದಲ್ಲಿ ಒಂದು ಮಾದರಿ ಬದಲಾವಣೆ (ಮೂಲಭೂತ ಬದಲಾವಣೆ) ನಡೆದಿದೆ. ಮಾಧ್ಯಮದ ಇತಿಹಾಸದಲ್ಲಿ ವಾಸ್ತವದಿಂದ ಕಲ್ಪನೆಗೆ ವಿಕಾಸದ ವಿವಿಧ ಹಂತಗಳನ್ನು ಕಾಣಬಹುದು. ಆದರೆ ಈಗ ಕೇರಳದ ಮಾಧ್ಯಮಗಳು ಕಲಕುತ್ತಿರುವುದು ಆಲೋಚನೆಗಳನ್ನಲ್ಲ, ಭಾವನೆಗಳನ್ನು ಹುಟ್ಟುಹಾಕುತ್ತಿದೆ ಎಂದು ಅವರು ಹೇಳಿದರು.

ಈಗ ಬಂಡವಾಳಶಾಹಿಗಳೇ ಸುದ್ದಿ ನಿರೂಪಕರು ಮತ್ತು ವರದಿಗಾರರಾಗಿರುವ ಸಮಯ. ಸೋಷಿಯಲ್ ಮೀಡಿಯಾದ ಸಾಧ್ಯತೆಯನ್ನು ಸದುಪಯೋಗಪಡಿಸಿಕೊಂಡು ಅನೇಕರು ಸ್ವತಂತ್ರ ಪತ್ರಕರ್ತರಾಗಿದ್ದಾರೆ ಎಂದು ಸಚಿವ ರಾಜೀವ್ ಹೇಳಿದರು.

ಮಾಧ್ಯಮಗಳು ಸರ್ಕಾರವನ್ನು ಟೀಕಿಸಬಾರದು ಎಂದು ನಾವು ಯಾವತ್ತೂ ಹೇಳಿಲ್ಲ. ಮಾಧ್ಯಮ ಸ್ವಾತಂತ್ರ್ಯ ಬಲವಾಗಿರುವ ರಾಜ್ಯ ಕೇರಳ. ಸರ್ಕಾರ ಮಾಡಿರುವ ಒಳ್ಳೆಯ ಕೆಲಸಗಳನ್ನು ಜನರ ಬಳಿಗೆ ತರಬೇಕು, ತಪ್ಪಿದ್ದರೆ ಸರಿಪಡಿಸಲು ಸರ್ಕಾರ ಸದಾ ಸಿದ್ಧವಿದೆ ಎಂದು ಸಚಿವರು ಹೇಳಿದರು.

ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷೆ ವಿನೀತಾ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಪ್ರೊ.ಕೆ.ವಿ. ಥಾಮಸ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಎನ್.ರಾಧಾಕೃಷ್ಣನ್, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಆರ್. ಬಾಬು ಹಾಗೂ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣ್ ಬಾಬು ಮಾತನಾಡಿದರು. ಸುರೇಶ್ ವೆಳ್ಳಿಮಂಗಲಂ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries