ಕಾಸರಗೋಡು : ನಗರದ ಕೂಡ್ಲು ಸನಿಹದ ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದ ಜಿರ್ನೋದ್ಧಾರ ಸಮಿತಿ ಹಾಗೂ ಊರಿನ ಭಕ್ತ ಜನರ ಸಭೆ ದೇವಸ್ಥಾನದಲ್ಲಿ ಜರುಗಿತು. ನವರಾತ್ರಿ ಮಹೋತ್ಸವ ಕಳೆದ ನಂತರ ಶ್ರೀ ಕ್ಷೇತ್ರದ ಜಿರ್ಣೋದ್ಧಾರ ಕೆಲಸ ಕಾರ್ಯಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಶ್ರೀದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠೆ ಮಾಡುವ ವಿಷಯ ಹಾಗೂ ಶಿಲಾನ್ಯಾಸದ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ್ ರಾಜ್ ಕಾಳ್ಯಂಗಾಡು ಅಧ್ಯಕ್ಷತೆ ವಹಿಸಿದ್ದರು, ಸಮಿತಿ ಗೌರವಾಧ್ಯಕ್ಷ ಡಾ. ಕೆ ಎನ್ ವೆಂಕಟ್ರಮಣ ಹೊಳ್ಳ, ಆಡಳಿತ ಮೊಕ್ತೇಸರ ಅಚ್ಯುತ ಕಾಳ್ಯಂಗಾಡು, ರಾಧಾ, ಶೋಭನ, ನಾರಾಯಣ ಪೂಜಾರಿ, ಲವ ಮೀಪುಗುರಿ, ಗೋವಿಂದ ಎಸ್‍ಎಂಎಸ್ ಮೊದಲಾದವರು ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಹರೀಶ್ ಕೆ ಆರ್ ಸ್ವಾಗತಿಸಿದರು. ಸಮಿತಿ ಕೋಶಾಧಿಕಾರಿ ಶಾಂತಕುಮಾರ್ ವಂದಿಸಿದರು .